Saturday, July 6, 2024
Google search engine
Homeಕ್ರೀಡೆಯುರೋ ಕಪ್: ಬೆಲ್ಜಿಯಂ ಸ್ವ ಗೋಲಿನಿಂದ ಗೆದ್ದ ಫ್ರಾನ್ಸ್ ಕ್ವಾರ್ಟರ್ ಪ್ರವೇಶ

ಯುರೋ ಕಪ್: ಬೆಲ್ಜಿಯಂ ಸ್ವ ಗೋಲಿನಿಂದ ಗೆದ್ದ ಫ್ರಾನ್ಸ್ ಕ್ವಾರ್ಟರ್ ಪ್ರವೇಶ

ಸಮಬಲದ ಪಂದ್ಯದ ಕೊನೆಯ ಹಂತದಲ್ಲಿ ಸ್ವ ಗೋಲು ಬಾರಿಸಿ ಬೆಲ್ಜಿಯಂ ತಂಡ ಎಡವಟ್ಟು ಮಾಡಿಕೊಂಡಿದ್ದರಿಂದ ಮಾಜಿ ವಿಶ್ವ ಚಾಂಪಿಯನ್ ಫ್ರಾನ್ಸ್ ತಂಡ ಯುರೋ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.

ಸೋಮವಾರ ನಡೆದ ಪ್ರೀಕ್ವಾರ್ಟರ್ ಫೈನಲ್ ಪಂದ್ಯದ 85ನೇ ನಿಮಿಷದಲ್ಲಿ ಬೆಲ್ಜಿಯಂ ತಂಡದ ಜಾನ್ ವೆರ್ಥೋಂಗೇನ್ ಸ್ವಯಂ ಗೋಲು ಬಾರಿಸಿ ಫ್ರಾನ್ಸ್ ಗೆ ಗೆಲುವಿನ ಉಡುಗೊರೆ ನೀಡಿದರು.

ಫ್ರಾನ್ಸ್ ತಂಡದ ಕುಲೊ ಮೌನಿ ಬೆಲ್ಜಿಯಂ ತಂಡದ ಎದುರಾಳಿ ಪಾಳಯಕ್ಕೆ ನುಗ್ಗಿ ಗೋಲು ಬಾರಿಸಲು ಯತ್ನಿಸಿದರು. ಈ ವೇಳೆ ರಕ್ಷಣಾ ಆಟಗಾರ ಜಾನ್ ವೆರ್ಥೋಂಗೇನ್ ತಡೆಯುವ ಪ್ರಯತ್ನದಲ್ಲಿ ಸ್ವಯಂ ಗೋಲು ಬಾರಿಸಿ ಫ್ರಾನ್ಸ್ ಗೆ ಉಡುಗೊರೆ ನೀಡಿದರು.

ಪೋರ್ಚುಗಲ್ ಮತ್ತು ಸ್ಲೊವೇನಿಯಾ ನಡುಣ ಮತ್ತೊಂದು ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದ ವಿಜೇತರನ್ನು ಫ್ರಾನ್ಸ್ ಕ್ವಾರ್ಟರ್ ಫೈನಲ್ ನಲ್ಲಿ ಎದುರಿಸಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments