ಬೆಂಗಳೂರು: ಭಾರತದ ಅತಿದೊಡ್ಡ ಅಮ್ಯೂಸ್ಮೆಂಟ್ ಪಾರ್ಕ್ ಸರಪಳಿಯಾದ ವಂಡರ್ಲಾ ಹಾಲಿಡೇಸ್ ಲಿಮಿಟೆಡ್, ಈ ಸಲದ ಮಕ್ಕಳ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲು ಉತ್ಸುಕವಾಗಿದೆ.
ನವೆಂಬರ್ 17 ರಂದು ಫಂಡ್ ಎ ಚೈಲ್ಡ್ ಇನ್ ಇಂಡಿಯಾ ದಿಂದ ವಂಡರ್ಲಾ ಬೆಂಗಳೂರಿಗೆ 300 ಮಕ್ಕಳನ್ನು ಸ್ವಾಗತಿಸಲಿದೆ. ಆ ದಿನವಿಡೀ ಮಕ್ಕಳು ನಗು, ಚಟುವಟಿಕೆಗಳು ಮತ್ತು ರೋಮಾಂಚಕ ಅನುಭವಗಳಲ್ಲಿ ತೇಲಿಹೋಗಲಿವೆ. ಪ್ರತಿ ಮಗುವಿಗೂ ಉಚಿತ ಪ್ರವೇಶ, ಉಪಾಹಾರ, ವೇಷಭೂಷಣಗಳು, ಊಟ, ತಿಂಡಿ ಮತ್ತು ಲಾಕರ್ಗಳನ್ನು ಒದಗಿಸಲಾಗುತ್ತದೆ. ಮಕ್ಕಳು ಆ ದಿನವಿಡೀ ನಿಶ್ಚಿಂತರಾಗಿ ಉದ್ಯಾನವನದಲ್ಲಿ ಆನಂದದಿಂದ ಕಾಲ ಕಳೆಯಬಹುದು.
ಈ ಸಲದ ಮಕ್ಕಳ ದಿನಾಚರಣೆಯ ಅಂಗವಾಗಿ ವಂಡರ್ಲಾ, ಬೆಂಗಳೂರು ಮಕ್ಕಳ ಮನಸೆಳೆಯುವ ರೋಮಾಂಚನಕಾರಿ ಘಟನೆಗಳ ಸರಣಿಯನ್ನು ಸಂಗ್ರಹಿಸಿದೆ! ಚಿತ್ರಕಲೆ ಸ್ಪರ್ಧೆ ಇರುತ್ತದೆ; ನಂತರ ಕ್ರೀಮ್ ದ ಕೇಕ್ ಕೇಕ್ ಅಥವಾ ಡೋನಟ್ ಇರುತ್ತದೆ. ಮಕ್ಕಳಿಗೆ ಸೃಜನಾತ್ಮಕ ಸ್ಪರ್ಧೆಗಳಲ್ಲಿ ಭಾಗವಹಿಸಲು ಮತ್ತು ರುಚಿಕರವಾದ ತಿನಿಸುಗಳನ್ನು ಸವಿಯಲು ಅವಕಾಶವಿರುತ್ತದೆ. ಒಟ್ಟಿನಲ್ಲಿ, ಈ ಮಕ್ಕಳ ದಿನ ಅವರ ಪಾಲಿಗೆ ಅವಿಸ್ಮರಣೀಯ ದಿನವಾಗಿರುತ್ತದೆ.
ಮಕ್ಕಳ ದಿನಾಚರಣೆ ಇರುವುದೇ ಚಿಕ್ಕ ಮಕ್ಕಳಿಗಾಗಿ ಮತ್ತು ಅವರಿಗೆ ಸಂತೋಷವನ್ನು ನೀಡುವುದಕ್ಕಾಗಿ. ಈ ಅದ್ಭುತವಾದ ಮಕ್ಕಳನ್ನು ವಂಡರ್ಲಾ, ಬೆಂಗಳೂರಿನಲ್ಲಿ ಕರೆತರುವುದು ನಮಗೊಂದು ಗೌರವ ಎಂದು ವಂಡರ್ಲಾ ಹಾಲಿಡೇಸ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೆ. ಚಿತ್ತಿಲಪ್ಪಿಳ್ಳಿ ಹೇಳಿದರು. “ಈ ಕಾರ್ಯಕ್ರಮವು ಕೇವಲ ಒಂದು ಆಚರಣೆ ಮಾತ್ರವಲ್ಲ; ಇದು ಸಂತೋಷವನ್ನು ಹರಡಲು ಮತ್ತು ಮಕ್ಕಳು ನಿರಾತಂಕವಾಗಿ ಮೋಜು ಮಾಡುವ ಸುರಕ್ಷಿತ ಸ್ಥಳವನ್ನು ಸೃಷ್ಟಿಸುವ ಗುರಿಯನ್ನು ಹೊಂದಿರುವ ಉಪಕ್ರಮವಾಗಿದೆ.
ಈ ಮಕ್ಕಳಲ್ಲಿ ಅನೇಕರಿಗೆ ಈ ರೀತಿಯ ದಿನವನ್ನು ಅನುಭವಿಸಲು ಅವಕಾಶವೇ ಹೊಂದಿಲ್ಲದಿರಬಹುದು. ಅವರಿಗೆ ಸಂಪೂರ್ಣ ಸಂತೋಷದ ಕ್ಷಣಗಳನ್ನು ನೀಡಲು ನಾವು ಬದ್ಧರಾಗಿದ್ದೇವೆ. ಅಲ್ಲಿ ಅವರಿಗೆ ತಾವೂ ಎಲ್ಲರಲ್ಲಿ ಒಂದು ಮತ್ತು ಎಲ್ಲರೂ ನಮ್ಮನ್ನು ಪ್ರೀತಿಸುತ್ತಾರೆ ಎಂಬ ಭಾವನೆಯನ್ನು ಹೊಂದುತ್ತಾರೆ. ಈ ಅನುಭವಗಳು ಅವರಿಗೆ ಅವರ ಜೀವನವಿಡೀ ಮಧುರ ಕ್ಷಣಗಳನ್ನು ನೀಡುತ್ತವೆ ಮತ್ತು ಸ್ಫೂರ್ತಿ ನೀಡುತ್ತವೆ ಎಂದು ನಾವು ಭಾವಿಸುತ್ತೇವೆ.
https://bookings.wonderla.com ನಲ್ಲಿ ಮುಂಗಡ ಬುಕಿಂಗ್ಗಾಗಿ ಟಿಕೆಟ್ಗಳು ಲಭ್ಯವಿದ್ದು, ವಂಡರ್ಲಾ ಬೆಂಗಳೂರು ಪ್ರತಿಯೊಬ್ಬರನ್ನೂ ಈ ಸಲದ ಮಕ್ಕಳ ದಿನಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸುತ್ತದೆ.
ವಂಡರ್ಲಾ ಹಾಲಿಡೇಸ್ ಲಿಮಿಟೆಡ್ ಬಗ್ಗೆ ವಂಡರ್ಲಾ ಹಾಲಿಡೇಸ್ ಲಿಮಿಟೆಡ್, ಭಾರತದ ಅತಿದೊಡ್ಡ ಮತ್ತು ಪ್ರಮುಖ ಅಮ್ಯೂಸ್ಮೆಂಟ್ ಪಾರ್ಕ್ ಆಪರೇಟರ್ ಆಗಿದೆ. ಇದು ಉನ್ನತ ಶ್ರೇಣಿಯ ಮನರಂಜನೆ ಮತ್ತು ಅನನ್ಯ ಆಕರ್ಷಣೆಗಳಿಗೆ ಹೆಸರುವಾಸಿಯಾಗಿದೆ.
ಕಂಪನಿಯು ಕೊಚ್ಚಿ, ಬೆಂಗಳೂರು, ಹೈದರಾಬಾದ್ ಮತ್ತು ಭುವನೇಶ್ವರ ಗಳಲ್ಲಿ ನಾಲ್ಕು ವಿಶ್ವದರ್ಜೆಯ ಅಮ್ಯೂಸ್ಮೆಂಟ್ ಪಾರ್ಕ್ಗಳನ್ನು ನಿರ್ವಹಿಸುತ್ತಿದೆ. ಬೆಂಗಳೂರಿನಲ್ಲಿನ ವಂಡರ್ಲಾ ರೆಸಾರ್ಟ್ ಬಹಳ ಹೆಸರುವಾಸಿಯಾಗಿದೆ. ಪ್ರಮುಖ ಅಂತಾರಾಷ್ಟ್ರೀಯ ಪೂರೈಕೆದಾರರಿಂದ ಹೇಳಿ ಮಾಡಿಸಿರುವ ಸವಾರಿಗಳೊಂದಿಗೆ ವಂಡರ್ಲಾ, ಭಾರತದಲ್ಲಿ ಸಾಟಿಯಿಲ್ಲದ ಅನುಭವಗಳನ್ನು ನೀಡುತ್ತದೆ.
2000 ರಲ್ಲಿ ಪ್ರಾರಂಭವಾದಾಗಿನಿಂದ, 43+ ಮಿಲಿಯನ್ ಜನರು ವಂಡರ್ಲಾ ಪಾರ್ಕ್ಗಳಿಗೆ ಭೇಟಿ ನೀಡಿ ಆನಂದಿಸಿದ್ದಾರೆ. ದೇಶದಲ್ಲಿಯೇ ಅತಿ ಹೆಚ್ಚು ಜನರು ಭೇಟಿ ನೀಡಿದ ಅಮ್ಯೂಸ್ಮೆಂಟ್ ಪಾರ್ಕ್ ಸರಣಿ ಎಂಬ ಖ್ಯಾತಿಯನ್ನು ಭದ್ರವಾಗಿ ತನ್ನದಾಗಿಸಿಕೊಂಡಿದೆ. ವಂಡರ್ಲಾ, ಭಾರತ ಮತ್ತು ಏಷ್ಯಾದ ಅತ್ಯುತ್ತಮ ಅಮ್ಯೂಸ್ಮೆಂಟ್ ಪಾರ್ಕ್ಗಳಲ್ಲಿ ಒಂದಾಗಿ ನಿರಂತರವಾಗಿ ಸ್ಥಾನ ಪಡೆದಿದೆ. ವಿನೋದ ಮತ್ತು ಕುಟುಂಬ ಮನರಂಜನೆಗಾಗಿ ಹೊಸ ಹೊಸ ಮಾನದಂಡಗಳನ್ನು ಸೃಷ್ಟಿಸುತ್ತಿದೆ.
ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಸಂಪರ್ಕಿಸಿ:
ವಂಡರ್ಲಾ ಹಾಲಿಡೇಸ್ ಲಿಮಿಟೆಡ್
ಇಮೇಲ್: pr@wonderla.com
ಪ್ರೇರಣಾ ಚಂದಿರಮಣಿ, ಸೀನಿಯರ್ ಎಕ್ಸಿಕ್ಯುಟಿವ್, ಎಂಎಸ್ಎಲ್ ಗ್ರೂಪ್
ಇಮೇಲ್: prerna.chandiramani@mslgroup.com