Friday, October 4, 2024
Google search engine
Homeಕ್ರೀಡೆಭಾರತಕ್ಕೆ ಗಂಭೀರ್, ಲಕ್ಷ್ಮಣ್ ಕೋಚ್: ಜಹೀರ್, ನೆಹ್ರಾ ಬೌಲಿಂಗ್ ಕೋಚ್?

ಭಾರತಕ್ಕೆ ಗಂಭೀರ್, ಲಕ್ಷ್ಮಣ್ ಕೋಚ್: ಜಹೀರ್, ನೆಹ್ರಾ ಬೌಲಿಂಗ್ ಕೋಚ್?

ಭಾರತ ಕ್ರಿಕೆಟ್ ತಂಡಕ್ಕೆ ಮುಖ್ಯ ಕೋಚ್ ಆಗಿ ಇಬ್ಬರು ನೇಮಕಗೊಳ್ಳುವ ಸಾಧ್ಯತೆ ಇದ್ದು, ಮಾಜಿ ಮಧ್ಯಮ ವೇಗಿಗಳಾದ ಜಹೀರ್ ಖಾನ್ ಮತ್ತು ಆಶಿಶ್ ನೆಹ್ರಾ ಇಬ್ಬರಲ್ಲಿ ಒಬ್ಬರು ಬೌಲಿಂಗ್ ಕೋಚ್ ಆಗಿ ನೇಮಕ ಮಾಡಿಕೊಳ್ಳಲು ಬಿಸಿಸಿಐ ಚಿಂತನೆ ನಡೆಸಿದೆ.

ಟಿ00 ವಿಶ್ವಕಪ್ ನಂತರ ರಾಹುಲ್ ದ್ರಾವಿಡ್ ಕೋಚ್ ಅವಧಿ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ನೂತನ ಕೋಚ್ ಆಯ್ಕೆಗಾಗಿ ಪ್ರಕ್ರಿಯೆ ಆರಂಭಿಸಿದೆ.

ಕೋಲ್ಕತಾ ನೈಟ್ ರೈಡರ್ಸ್ ತಂಡದ ಕೋಚ್ ಹಾಗೂ ಮಾಜಿ ಬ್ಯಾಟ್ಸ್ ಮನ್ ಗೌತಮ್ ಗಂಭೀರ್ ಅವರನ್ನು ಮುಖ್ಯ ಕೋಚ್ ಹುದ್ದೆಗೆ ನೇಮಕ ಮಾಡಿಕೊಳ್ಳಿದ್ದು, ವಿವಿಎಸ್ ಲಕ್ಷ್ಮಣ್ ಅವರನ್ನು ಅರೆಕಾಲಿಕ ಕೋಚ್ ಆಗಿ ಮುಂದುವರಿಸ ಬಿಸಿಸಿಐ ಚಿಂತನೆ ನಡೆಸಿದೆ.

ಗಂಭೀರ್ ಷರತ್ತುಗಳಿಗೆ ಬಿಸಿಸಿಐ ಒಪ್ಪಿಗೆ ಸೂಚಿಸಿದ್ದು, ಮೂರು ಮಾದರಿಯ ಕ್ರಿಕೆಟ್ ಗೆ ಮೂರು ಮಾದರಿಯ ಪ್ರತ್ಯೇಕ ತಂಡ ರಚಿಸುವುದು ಹಾಗೂ ಬೌಲಿಂಗ್ ಕೋಚ್ ಸೇರಿದಂತೆ ವಿವಿಧ ಬೇಡಿಕೆಗಳನ್ನು ಇಡಲಾಗಿದೆ ಎಂದು ಹೇಳಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments