Thursday, September 19, 2024
Google search engine
Homeತಾಜಾ ಸುದ್ದಿಲೋಕಸಭೆ ಉಪನಾಯಕರಾಗಿ ಕಾಂಗ್ರೆಸ್ ನ ಗೌರವ್ ಗೊಗೊಯ್ ನೇಮಕ

ಲೋಕಸಭೆ ಉಪನಾಯಕರಾಗಿ ಕಾಂಗ್ರೆಸ್ ನ ಗೌರವ್ ಗೊಗೊಯ್ ನೇಮಕ

ಲೋಕಸಭೆಯ ಉಪನಾಯಕ ಸ್ಥಾನಕ್ಕೆ ಅಸ್ಸಾಂನ ಸಂಸದ ಗೌರವ್ ಗೊಗೊಯ್ ಅವರನ್ನು ಕಾಂಗ್ರೆಸ್ ಆಯ್ಕೆ ಮಾಡಿದೆ.

ಲೋಕಸಭಾ ಸ್ಪೀಕರ್ ಓಂಪ್ರಕಾಶ್ ಬಿರ್ಲಾ ಅವರಿಗೆ ಪತ್ರ ಬರೆದಿರುವ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿ ಸೋನಿಯಾ ಗಾಂಧಿ, ಲೋಕಸಭಾ ಉಪನಾಯಕನ ಸ್ಥಾನಕ್ಕೆ ಅಭ್ಯರ್ಥಿಯಾಗಿ ಗೌರವ್ ಗೊಗೊಯ್ ಅವರನ್ನು ನೇಮಕ ಮಾಡಿರುವುದಾಗಿ ತಿಳಿಸಿದ್ದಾರೆ.

ಕೋಡಿಕುನ್ನಿಲ್ ಸುರೇಶ್ ಅವರನ್ನು ಮುಖ್ಯ ಸಚೇತಕ ಹುದ್ದೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನೇಮಕ ಮಾಡಿರುವುದಾಗಿ ಪತ್ರದಲ್ಲಿ ಸೋನಿಯಾ ಗಾಂಧಿ ತಿಳಿಸಿದ್ದಾರೆ.

ಕಾಂಗ್ರೆಸ್ ಸಂಸದರಾದ ಮಣಿಕಮ್ ಠಾಕೂರ್ ಮತ್ತು ಎಂಡಿ ಜಾವೇದ್ ಅವರನ್ನು ವಿಪ್ ಆಗಿ ನೇಮಕ ಮಾಡಿರುವುದಾಗಿ ಕಾಂಗ್ರೆಸ್ ವಕ್ತಾರ ಕೆ.ಸಿ. ವೇಣುಗೋಪಾಲ್ ಪ್ರಕಟಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments