Wednesday, June 26, 2024
Google search engine
Homeತಾಜಾ ಸುದ್ದಿಒಂಟಿಯಾಗಿ ಬಾವಿ ತೊಡಿದ ಗೌರಿ: 50 ಅಡಿ ಆಳದ ಬಾವಿಯಲ್ಲಿ ಉಕ್ಕಿದ ನೀರು!

ಒಂಟಿಯಾಗಿ ಬಾವಿ ತೊಡಿದ ಗೌರಿ: 50 ಅಡಿ ಆಳದ ಬಾವಿಯಲ್ಲಿ ಉಕ್ಕಿದ ನೀರು!

ಕಳೆದ 36 ದಿನಗಳಿಂದ ಅಂಗನವಾಡಿ ಆವರಣದಲ್ಲಿ ಏಕಾಂಗಿಯಾಗಿ ಬಾವಿ ತೋಡುತ್ತಿದ್ದ ಇಲ್ಲಿನ ಗಣೇಶ ನಗರದ ಮಹಿಳೆ ಗೌರಿ ನಾಯ್ಕ ನೀರು ತರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು 50 ಅಡಿ ಬಾವಿ ತೋಡಿ, ಗಂಗೆಯನ್ನು ಹೊರತರುವಲ್ಲಿ ಸಫಲರಾಗಿದ್ದಾರೆ.

ಗೌರಿಯ ಈ ಸಾಧನೆಗೆ ಸ್ಥಳೀಯ ಸಾರ್ವಜನಿಕರು ತೀವ್ರ ಸಂತೋಷ ವ್ಯಕ್ತಪಡಿಸಿ, ಗ್ರಾಮದ ಸುತ್ತಲೂ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಜ. 30ರಂದು ಶಿರಸಿ ಗಣೇಶ ನಗರದ ಅಂಗನವಾಡಿ ನಂಬರ್‌ 6ರಲ್ಲಿ ಮಕ್ಕಳಿಗೆ ಕುಡಿಯುವ ನೀರಿನ ಕೊರತೆ ಕಂಡು ಶಾಶ್ವತ ಪರಿಹಾರ ಕಲ್ಪಿಸಲು ಗೌರಿ ನಾಯ್ಕ (58) ಬಾವಿ ತೋಡಲು ಶ್ರೀಕಾರ ಹಾಕಿದ್ದರು.

30 ಅಡಿ ಆಳ ಬಾವಿ ತೆಗೆದ ಗೌರಿಯ ಸಾಹಸವನ್ನು ಮಾಧ್ಯಮಗಳು ಪ್ರಚಾರ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಡ್ಡಗಾಲು ಹಾಕಿ, ಬಾವಿ ಮುಚ್ಚಿಸಲಾಗಿತ್ತು. ಅದನ್ನು ಖಂಡಿಸಿ ಸ್ಥಳೀಯರು ಪ್ರತಿಭಟಿಸಿ, ಸಹಾಯಕ ಆಯುಕ್ತರ ಕಚೇರಿಗೆ ಹಾಗೂ ತಹಸೀಲ್ದಾ‌ರ್ ಕಚೇರಿಗೆ ಮನವಿ ಸಲ್ಲಿಸಿದ್ದರು. ಬಳಿಕ ಅನುಮತಿ ಸಿಕ್ಕಿತ್ತು. ಇದೀಗ ತೆಗೆದ ಬಾವಿಯಲ್ಲಿ ನೀರು ಸಿಕ್ಕಿರುವುದು ಸಂತಸ ತಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments