Wednesday, July 3, 2024
Google search engine
Homeಕ್ರೀಡೆಯುರೋ ಕಪ್: ಸ್ಪೇನ್ ಆಟಕ್ಕೆ ಜಾರ್ಜಿಯಾ ಸ್ಟನ್, ಕ್ವಾರ್ಟರ್ ನಲ್ಲಿ ಜರ್ಮನಿ ಎದುರಾಳಿ

ಯುರೋ ಕಪ್: ಸ್ಪೇನ್ ಆಟಕ್ಕೆ ಜಾರ್ಜಿಯಾ ಸ್ಟನ್, ಕ್ವಾರ್ಟರ್ ನಲ್ಲಿ ಜರ್ಮನಿ ಎದುರಾಳಿ

ಆರಂಭದಲ್ಲೇ ಸ್ವ ಗೋಲಿನ ಉಡುಗೊರೆ ಕೊಟ್ಟು ಆಘಾತಕ್ಕೆ ಒಳಗಾಗಿದ್ದ ಮಾಜಿ ವಿಶ್ವ ಚಾಂಪಿಯನ್ ಸ್ಪೇನ್ ತಂಡ 4-1 ಗೋಲುಗಳಿಂದ ಜಾರ್ಜಿಯಾ ತಂಡವನ್ನು ಸೋಲಿಸಿ ಯುರೋ ಕಪ್ 2024 ಫುಟ್ಬಾಲ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.

ಭಾನುವಾರ ಬರ್ಲಿನ್ ನಲ್ಲಿ ನಡೆದ ಪ್ರೀಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ಪೇನ್ ಪರ ರೋಡ್ರಿ (38ನೇ ನಿಮಿಷ), ಫ್ಯಾಬಿಯಾನ್ ರುಯಿಜ್ (51ನೇ ನಿಮಿಷ), ನಿಕೊ ವಿಲಿಯಮ್ಸ್ (75ನೇ ನಿಮಿಷ) ಮತ್ತು ಡ್ಯಾನಿ ಒಲ್ಮೊ (83ನೇ ನಿಮಿಷ) ತಲಾ ಒಂದು ಗೋಲು ಸಿಡಿಸಿ ರೋಚಕ ಗೆಲುವು ತಂದುಕೊಟ್ಟರು.

31 ವರ್ಷಗಳ ನಂತರ ಇಟಲಿಯನ್ನು ಮಣಿಸಿ ಪ್ರೀಕ್ವಾರ್ಟರ್ ಫೈನಲ್ ಪ್ರವೇಶಿಸಿ ಇತಿಹಾಸ ಬರೆದಿದ್ದ ಜಾರ್ಜಿಯಾ ಆಟಗಾರರು ಸ್ಪೇನ್ ರಕ್ಷಣೆಯನ್ನು ಭೇದಿಸಲು ವಿಫಲವಾದರೂ ರಾಬಿನ್ ಲೀ ನರ್ಮಂಡ್ 19ನೇ ನಿಮಿಷದಲ್ಲಿ ಸ್ವಯಂ ಗೋಲು ಬಾರಿಸಿ ಮುನ್ನಡೆ ತಂದುಕೊಟ್ಟರೂ ಅದನ್ನು ಉಳಿಸಿಕೊಳ್ಳಲು ವಿಫಲವಾಯಿತು.

ಜಾರ್ಜಿಯಾ ವಿಶ್ವ ಫುಟ್ಬಾಲ್ ರ್ಯಾಂಕಿಂಗ್ ನಲ್ಲಿ 74ನೇ ಸ್ಥಾನ ಪಡೆದಿದ್ದು, ಸ್ಪೇನ್ ಗಿಂತ 66 ಸ್ಥಾನ ಕೆಳಗಿದೆ. ಆದರೆ ತಂಡ ಉತ್ತಮ ಪ್ರದರ್ಶನದೊಂದಿಗೆ ಅಭಿಯಾನ ಅಂತ್ಯಗೊಳಿಸಿತು. ಕ್ವಾರ್ಟರ್ ಫೈನಲ್ ನಲ್ಲಿ ಮಾಜಿ ವಿಶ್ವ ಚಾಂಪಿಯನ್ ಜರ್ಮನಿ ತಂಡವನ್ನು ಸ್ಪೇನ್ ಎದುರಿಸಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments