2
ಲಾಂಗ್ ಜಂಪ್ ಪಟು ಪ್ರವೀಣ್ ಕುಮಾರ್ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ 6ನೇ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಈ ಮೂಲಕ ಭಾರತ ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲೇ ಗರಿಷ್ಠ ಚಿನ್ನದ ಗೆದ್ದ ದಾಖಲೆ ಬರೆಯಿತು.
ಶುಕ್ರವಾರ ನಡೆದ ಪುರುಷರ ಎಫ್ 64 ವಿಭಾಗದ ಫೈನಲ್ ನಲ್ಲಿ 2.08 ಮೀ. ಎತ್ತರ ಜಿಗಿಯುವ ಮೂಲಕ ಏಷ್ಯನ್ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದರು.
ಅಮೆರಿಕದ ಡೆರೆಕ್ ಲೊಕೆಡೆಂಡ್ ಎರಡನೇ ಸ್ಥಾನಕ್ಕೆ ಕುಸಿದರು. ಆದರೆ ಇವರ ಹೆಸರಿನಲ್ಲಿದ್ದ 2.09 ಮೀ. ದಾಖಲೆ ಮುರಿಯುವ ಅವಕಾಶವನ್ನು ಪ್ರವೀಣ್ ಕೂದಲೆಳೆ ಅಮತರದಲ್ಲಿ ಕಳೆದುಕೊಂಡರು.