ಕಬ್ಬಿಣ ರಾಡ್ ಮತ್ತು ಕಬ್ಬಿಣದ ತುಂಡುಗಳನ್ನು ಸಾಗಿಸುತ್ತಿದ್ದ ಗೂಡ್ಸ್ ರೈಲು ಮಂಗಳವಾರ ರಾತ್ರಿ ಹಳಿ ತಪ್ಪಿದ ಘಟನೆ ತೆಲಂಗಾಣದ ರಾಘವಪುರಂ ಮತ್ತು ರಾಮಗುಂಡಮ್ ಬಳಿ ಸಂಭವಿಸಿದೆ.
ಪೆಡಾಪಳ್ಳಿ ಜಿಲ್ಲೆಯಲ್ಲಿ ಗೂಡ್ಸ್ ರೈಲಿನ 12 ಬೋಗಿಗಳು ಹಳಿ ತಪ್ಪಿದೆ. ಇದರಿಂದ ಎಲ್ಲಾ ಮೂರು ರೈಲ್ವೇ ಮಾರ್ಗಗಳ ಹಳಿಗಳು ಹಾನಿಗೊಳಗಾಗಿವೆ ಎಂದು ರಾತ್ರಿ 10 ಗಂಟೆ ಸುಮಾರಿಗೆ ಅಧಿಕಾರಿಗಳಿಗೆ ಮಾಹಿತಿ ಬಂದಿದೆ. ಇದ
ರೈಲು ಹಳಿ ದಕ್ಷಿಣ ಭಾರತ ಮತ್ತು ಈಶಾನ್ಯ ರಾಜ್ಯಗಳ ಮೂಲಕ ಸಂಚರಿಸಲು ಪ್ರಮುಖ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, 39 ಪ್ರಯಾಣಿಕ ರೈಲು ಸಂಚಾರಗಳನ್ನು ರದ್ದುಗೊಳಿಸಲಾಗಿದೆ. ಅಲ್ಲದೇ 61 ರೈಲುಗಳ ಸಂಚಾರ ಮಾರ್ಗವನ್ನು ಬದಲಾಯಿಸಲಾಗಿದೆ. 7 ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದೆ.
ಕರ್ನಾಟಕದ ಬಳ್ಳಾರಿಯಿಂದ ಹೊರಟ ಗೂಡ್ಸ್ ರೈಲು ಉತ್ತರ ಪ್ರದೇಶದ ಗಾಜಿಯಾಬಾದ್ ಗೆ ತೆರಳುತ್ತಿತ್ತು. ರೈಲು ಹಳಿ ತಪ್ಪಲು ಕಾರಣ ತಿಳಿದು ಬಂದಿಲ್ಲ. ಆದರೆ ಅತ್ಯಂತ ಸಂಚಾರ ದಟ್ಟಣೆ ಹೊಂದಿರುವ ರೈಲು ಮಾರ್ಗಗಳು ಕೂಡ ಬಂದ್ ಆಗಿದೆ.