Saturday, September 28, 2024
Google search engine
Homeತಾಜಾ ಸುದ್ದಿರಾಜ್ಯಪಾಲರ ಪತ್ರ ರಾಜಕೀಯಕ್ಕೆ ಅಧಿಕಾರಿಗಳ ಉತ್ತರಕ್ಕೆ ಬ್ರೇಕ್: ಸಂಪುಟ ಸಭೆಯಿಂದಲೇ ಉತ್ತರಕ್ಕೆ ನಿರ್ಣಯ

ರಾಜ್ಯಪಾಲರ ಪತ್ರ ರಾಜಕೀಯಕ್ಕೆ ಅಧಿಕಾರಿಗಳ ಉತ್ತರಕ್ಕೆ ಬ್ರೇಕ್: ಸಂಪುಟ ಸಭೆಯಿಂದಲೇ ಉತ್ತರಕ್ಕೆ ನಿರ್ಣಯ

ರಾಜ್ಯಪಾಲರು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಅಥವಾ ಅಧಿಕಾರಿಗಳಿಗೆ ಪದೇಪದೆ ಉತ್ತರ ಕೋರಿ ಪತ್ರ ಬರೆಯುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳ ಉತ್ತರಕ್ಕೆ ಕಡಿವಾಣ ಹಾಕಿ ಸಚಿವ ಸಂಪುಟ ಸಭೆಯಿಂದಲೇ ಉತ್ತರ ನೀಡಲು ರಾಜ್ಯ ಸಚಿವ ಸಂಪುಟ ಸಭೆ ನಿರ್ಣಯಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸಚಿವ ಎಂಬಿ ಪಾಟೀಲ್ ಸಭೆಯ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯಪಾಲರಿಂದ ಸ್ವೀಕೃತವಾಗುವ ಪತ್ರಗಳ ವಿಲೇವಾರಿ ಕೈಗೊಳ್ಳುವ ಮುನ್ನ ಸಚಿವ ಸಂಪುಟದ ಗಮನಕ್ಕೆ ತರಬೇಕೆಂದು ತದನಂತರ ಮುಖ್ಯ ಕಾರ್ಯದರ್ಶಿಯವರು ಸಚಿವ ಸಂಪುಟದ ನಿರ್ಣಯದಂತೆ ರಾಜಭವನಕ್ಕೆ ಮಾಹಿತಿಯನ್ನ ಒದಗಿಸುಲು ರಾಜ್ಯ ಸಚಿವ ಸಂಪುಟ ಇಂದು ನಿರ್ಣಯಿಸಿದೆ.

ಸಚಿವ ಸಂಪುಟದ ಸಭೆಯ ನಂತರ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಶ್ರೀ ಎಚ್.ಕೆ. ಪಾಟೀಲ ಇಂದಿಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ರಾಜ್ಯಪಾಲರು ಆಗಸ್ಟ್ 17ರಂದು ಪತ್ರದಲ್ಲಿ ರಾಜ್ಯಪಾಲರ ಕಚೇರಿಯಲ್ಲಿ ಬಾಕಿ ಇರುವ ಲೋಕಾಯುಕ್ತದಿಂದ ಸ್ವೀಕೃತವಾಗಿರುವ ಅಭಿಯೋಜನಾ ಮಂಜೂರಾತಿ ಪ್ರಕರಣಗಳ ಕುರಿತ ಮಾಹಿತಿ ಹೇಗೆ ಸೋರಿಕೆಯಾಯಿತು ಎಂಬ ಬಗ್ಗೆ ತನಿಖೆ ನಡೆಸಬೇಕೆಂದು ಮಾನ್ಯ ರಾಜ್ಯಪಾಲರು ಕರ್ನಾಟಕ ಸರ್ಕಾರದ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದ್ದರು.

ಪೊಲೀಸ್ ಮಹಾನಿರ್ದೇಶಕರು ಆಗಸ್ಟ್ 20ರಂದು ಪತ್ರ ಬರೆದು ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ವಿಶೇಷ ತನಿಖಾದಳ ಕರ್ನಾಟಕ ಲೋಕಾಯುಕ್ತ ಬೆಂಗಳೂರು ರವರಿಗೆ ಪತ್ರ ಬರೆದು ಈ ಕುರಿತು ವಿವರಗಳನ್ನು ತಿಳಿಯಬಯಸಿದ್ದರು. ಈ ಪತ್ರಕ್ಕೆ ಉತ್ತರವಾಗಿ ಸೆಪ್ಟೆಂಬರ್ 4ರಂದು ವಿಶೇಷ ತನಿಖಾ ದಳದ ಇನ್ ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ವರದಿ ಕಳಿಸಿ ಈ ಸೋರಿಕೆಯಾದ ಕಾಗದಪತ್ರಗಳು 2023 ನವೆಂಬರ್ 24ರಿಂದ 2024 ಆಗಸ್ಟ್ 8ರವರೆಗೆ ರಾಜಭವನ ಸಚಿವಾಲಯದಲ್ಲಿಯೇ 8 ತಿಂಗಳ ವರೆಗೆ ಇದ್ದವು ಎಂದು ಉತ್ತರ ಬರೆದಿದ್ದಾರೆ ಎಂದು ಸಚಿವರು ವಿವರಿಸಿದರು.

ರಾಜಭವನ ಸಚಿವಾಲಯಕ್ಕೆ ಸಂಬಂಧಪಟ್ಟಂತೆ ಯಾವ ಹಂತದಲ್ಲಿ ಮಾಹಿತಿ ಸೋರಿಕೆಯಾಗಿದೆ, ದಾಖಲೆಗಳು ಬಹಿರಂಗಗೊಂಡಿವೆ ಎಂಬ ಬಗ್ಗೆ ತನಿಖೆ ನಡೆಸಲು ತಮಗೆ ಅನುಮತಿ ನೀಡಬೇಕೆಂದು ಇನ್ ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ರವರು ಕೋರಿರುತ್ತಾರೆ. ಈ ವಿಷಯ ಮಾಧ್ಯಮದಲ್ಲಿ ಹೇಗೆ ಪ್ರಸಾರವಾಯಿತು ಎಂಬ ಬಗ್ಗೆ ತನಿಖೆ ನಡೆಸಲು ಅನುಮತಿ ಕೋರಿರುವುದಾಗಿ ಸಚಿವರು ಪೂರ್ಣ ವಿವರಗಳನ್ನು ನೀಡಿದರು.

ಸಿಬಿಐ ತನಿಖೆಗೆ ರಾಜ್ಯದಲ್ಲಿ ಮುಕ್ತ ಅವಕಾಶವಿದ್ದುದನ್ನು ಹಿಂಪಡೆಯಲಾಗಿದೆ ಎಂದು ಸಚಿವರು ವಿವರಿಸಿದರು. ಸಿಬಿಐ ಗೆ ಸಹಜವಾದ ಪೂರ್ವಾಗ್ರಹ ಇದೆ ಎಂಬುದು ಇತ್ತೀಚಿನ ದಿನಗಳಲ್ಲಿ ದೃಢಪಡುತ್ತಿರುವ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಸಿ.ಬಿ.ಐ ಗೆ ಯಾವುದೇ ಮುಕ್ತ ಅವಕಾಶವಿರಬಾರದೆಂದು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಸಿಬಿಐ ಸಂಸ್ಥೆಯನ್ನು ಕೇಂದ್ರ ಸರ್ಕಾರ ರಾಜಕೀಯ ಉದ್ದೇಶಗಳಿಗಾಗಿ ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಈ ಕ್ರಮ  ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಇನ್ನು ಮುಂದೆ ಯಾವುದಾದರೂ ಪ್ರಕರಣದಲ್ಲಿ ಸಿಬಿಐ ಮೂಲಕ ತನಿಖೆ ನಡೆಯಬೇಕಾದರೆ ರಾಜ್ಯ ಸರ್ಕಾರದ ಒಪ್ಪಿಗೆ ಮುಖ್ಯವಾದದ್ದು ಮತ್ತು ರಾಜ್ಯದಲ್ಲಿನ ಪ್ರಕರಣಗಳನ್ನು ಪ್ರಕರಣವಾರು ಆಧಾರದ ಮೇಲೆ ತನಿಖೆ ನಡೆಸಲು ಸಿಬಿಐ ತನಿಖಾ ಸಂಸ್ಥೆಗೆ ಅನುಮತಿ ನೀಡಲು ಪರಿಶೀಲಿಸಲಾಗುವುದು ಎಂದು ಸಚಿವರು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments