Thursday, September 19, 2024
Google search engine
Homeತಾಜಾ ಸುದ್ದಿ24,657 ಕೋಟಿಯ 8 ಬೃಹತ್ ರೈಲ್ವೆ ಯೋಜನೆಗಳಿಗೆ ಗ್ರೀನ್ ಸಿಗ್ನಲ್: ಕರ್ನಾಟಕಕ್ಕೆ ಮಾತ್ರ ರೆಡ್ ಸಿಗ್ನಲ್!

24,657 ಕೋಟಿಯ 8 ಬೃಹತ್ ರೈಲ್ವೆ ಯೋಜನೆಗಳಿಗೆ ಗ್ರೀನ್ ಸಿಗ್ನಲ್: ಕರ್ನಾಟಕಕ್ಕೆ ಮಾತ್ರ ರೆಡ್ ಸಿಗ್ನಲ್!

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಶುಕ್ರವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ 8 ಬೃಹತ್ ರೈಲ್ವೆ ಯೋಜನೆಗಳಿಗೆ ಅನಮೋದನೆ ನೀಡಲಾಗಿದೆ. ದಕ್ಷಿಣ ಭಾರತಕ್ಕೆ ಕೇವಲ ಯೋಜನೆ ನೀಡಿದ್ದು, ಕರ್ನಾಟಕವನ್ನು ಮತ್ತೆ ಕಡೆಗಣಿಸಲಾಗಿದೆ.

ದಕ್ಷಿಣ ಭಾರತದಲ್ಲಿ ಮೈತ್ರಿ ಸರ್ಕಾರ ಇರುವ ಆಂಧ್ರಪ್ರದೇಶ-ತೆಲಂಗಾಣ, ಮಹಾರಾಷ್ಟ್ರ ಮತ್ತು ಬಿಹಾರಕ್ಕೆ ತಲಾ ಒಂದು ರೈಲ್ವೆ ಯೋಜನೆ ನೀಡಿದರೆ, ಕಾಂಗ್ರೆಸ್ ಬೆಂಬಲಿತ ಜಾರ್ಖಂಡ್ ನಲ್ಲಿ ಒಂದು ರೈಲ್ವೆ ಯೋಜನೆ ನೀಡಿದ್ದು, ಕರ್ನಾಟಕ, ತಮಿಳುನಾಡು, ಕೇರಳ ಮುಂತಾದ ರಾಜ್ಯಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ.

ಸಚಿವ ಸಂಪುಟ ಸಭೆಯ ನಂತರ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಭವ್ ಈ ವಿಷಯ ತಿಳಿಸಿದ್ದು, ಹೊಸ ರೈಲ್ವೆ ಯೋಜನೆಗಳಲ್ಲಿ 767 ಕಿ.ಮೀ. ದೂರ ಕಡಿತ ಮಾಡಲಾಗಿದೆ. ಈ ಯೋಜನೆಗಳು ಪೂರ್ಣಗೊಂಡಾಗ 143 ದಶಲಕ್ಷ ಕೆಜಿ ಕಾರ್ಬನ್ ಡೈಯಕ್ಸಿಡ್ ಉತ್ಪಾದನೆ ಆಗಲಿದ್ದು, ಮಾರ್ಗ ಕಡಿತದಿಂದ 767 ಕೋಟಿ ಟನ್ ಕಾರ್ಬನ್ ಡೈಯಾಕ್ಸಿಡ್ ಉತ್ಪನ್ನ ಮಾರಾಟ ಕಡಿಮೆ ಆಗಲಿದೆ. ಇದು 30 ಕೋಟಿ ಮರಗಳಿಗೆ ಸಮಾನ ಎಂದು ತಿಳಿಸಿದರು.

8 ಯೋಜನೆಗಳ ಪೈಕಿ 3 ರೈಲ್ವೆ ಯೋಜನೆಗಳು ಒಡಿಶಾ ಉತ್ತರ ಮತ್ತು ಈಶಾನ್ಯ ರಾಜ್ಯಗಳನ್ನು ಸಂಪರ್ಕಿಸಲಿದೆ. 3 ಯೋಜನೆಗಳು ಜಾರ್ಖಂಡ್, ಚಂಡೀಗಢ ಮತ್ತು ಒಡಿಶಾ, ಒಂದು ಆಂಧ್ರಪ್ರದೇಶ ಮತ್ತು ತೆಲಂಗಾಣ ನಡುವೆ, ಜಾರ್ಖಂಡ್ ಮತ್ತು ಬಿಹಾರ ನಡುವೆ ಮತ್ತು ಮಹಾರಾಷ್ಟ್ರಕ್ಕೆ ಒಂದು ಯೋಜನೆ ಸೇರಿವೆ.

ಈ 8 ರೈಲ್ವೆ ಯೋಜನೆಗಳಿಂದ ಪ್ರವಾಸೋದ್ಯಮ, ಆರ್ಥಿಕ ಅಭಿವೃದ್ಧಿ ಮತ್ತು ಉದ್ಯೋಗ ಅವಕಾಶಗಳನ್ನು ಗಮನಿಸಿ ಯೋಜನೆಗಳಿಗೆ ಅನುಮತಿ ನೀಡಲಾಗಿದೆ. ಮಹಾರಾಷ್ಟ್ರದಲ್ಲಿ ಜಲ್ಗಾಂನ್-ಜಲ್ನಾ ನಡುವೆ 174 ಕಿ.ಮೀ. ದೂರದ ಹೊಸ ರೈಲು ಮಾರ್ಗವಾಗಿದ್ದು, ಇದಕ್ಕಾಗಿ 7100 ಕೋಟಿ ರೂ. ವೆಚ್ಚವಾಗಲಿದೆ ಎಂದು ಹೇಳಿದರು.

ಈಶಾನ್ಯ ರಾಜ್ಯಗಳನ್ನು ಸಂಪರ್ಕಿಸುವ ಗುಣಪುರ್-ತರುಬಲೈ ಹೊಸ ಯೋಜನೆ (73 ಕಿ.ಮೀ.), ಜುನಾಘಡ್-ನಾಬರಗಂಗ್ ಪುರ್ ಹೊಸ ಯೋಜನೆ (116 ಕಿ.ಮೀ.), ಮಲ್ಕನ್ ಗಿರಿ ವಯಾ ಭದ್ರಾಚಲಂ- ಪಾಂಡುರಂಗಪುರಂ ಹೊಸ ಮಾರ್ಗ (173 ಕಿ.ಮೀ.). ಆರಂಭಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments