Wednesday, July 3, 2024
Google search engine
Homeಅಪರಾಧಹರಿಯಾಣ ಉದ್ಯಮಿ ಮೇಲೆ 35 ಸುತ್ತು ಗುಂಡು ಹಾರಿಸಿ ಢಾಬಾದಲ್ಲಿ ಹತ್ಯೆ

ಹರಿಯಾಣ ಉದ್ಯಮಿ ಮೇಲೆ 35 ಸುತ್ತು ಗುಂಡು ಹಾರಿಸಿ ಢಾಬಾದಲ್ಲಿ ಹತ್ಯೆ

ಮದ್ಯದ ಉದ್ಯಮಿಯನ್ನು ಢಾಬಾದಲ್ಲಿ ದುಷ್ಕರ್ಮಿಗಳು 35 ಸುತ್ತು ಗುಂಡು ಹಾರಿಸಿ ಹತ್ಯೆ ಮಾಡಿದ ಘಟನೆ ಹರಿಯಾಣದ ಸೋನಾಪೇಟ್ ನಲ್ಲಿ ಭಾನುವಾರ ನಡೆದಿದೆ.

ಸುಂದರ್ ಮಲಿಕ್ ಎಂಬ ಉದ್ಯಮಿ ಹತ್ಯೆಯಾಗಿದ್ದು, ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ ಆಗಿದೆ.

ಢಾಬಾದ ಹಿಂದಿನ ಭಾಗದಲ್ಲಿ ಇದ್ದ ಪಾರ್ಕಿಂಗ್ ನಲ್ಲಿ ಸುಂದರ್ ಮಲಿಕ್ ದುಷ್ಕರ್ಮಿಗಳು ಸುಮಾರು 35 ಸುತ್ತು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹರಿಯಾಣದ ಗ್ಯಾಂಗ್ ಸ್ಟರ್ ಹಿಮಾಂಶು ಅಲಿಯಾಸ್ ಬಾಬು ಈ ಹತ್ಯೆಯ ಹೊಣೆ ಹೊತ್ತುಕೊಂಡಿದ್ದಾರೆ. ಹಿಮಾಂಶು ಪ್ರಸ್ತುತ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದು, ಒಂದು ವರ್ಷದ ಹಿಂದೆಯೇ ಆತನ ವಿರುದ್ಧ ಗುಪ್ತಚರ ಇಲಾಖೆ ರೆಡ್ ನೋಟಿಸ್ ಜಾರಿ ಮಾಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments