Thursday, November 21, 2024
Google search engine
Homeಅಪರಾಧಹಾಸನ: ಕುಡಿಯಲು ಹಣ ನೀಡದ ತಾಯಿಯನ್ನು ಹೊಡೆದು ಕೊಂದ ಪಾಪಿ ಮಗ!

ಹಾಸನ: ಕುಡಿಯಲು ಹಣ ನೀಡದ ತಾಯಿಯನ್ನು ಹೊಡೆದು ಕೊಂದ ಪಾಪಿ ಮಗ!

ಕುಡಿಯಲು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಮನಬಂದಂತೆ ದೊಣ್ಣೆಯಿಂದ ಥಳಿಸಿ ತಾಯಿಯನ್ನೇ ಮಗ ಕೊಂದಿರುವ ಆಘಾತಕಾರಿ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

ಅರಕಲಗೂಡು ತಾಲೂಕಿನ ಮಧುರನಹಳ್ಳಿ ಗ್ರಾಮದ ನಿವಾಸಿ ಚಿಕ್ಕಮ್ಮ (61) ಅವರನ್ನು ಪುತ್ರ ಭರತ್ (26) ಹೊಡೆದು ಕೊಂದಿದ್ದಾನೆ.

ಪೈಂಟ್ ಕೆಲಸ ಮಾಡುತ್ತಿದ್ದ ಭರತ್ ಕುಡಿತದ ದಾಸನಾಗಿದ್ದು, ಅಕ್ಟೋಬರ್ 29ರಂದು ಕಂಠಪೂರ್ತಿ ಕುಡಿದು ಮನೆಗೆ ಬಂದಿದ್ದ.

ತಾಯಿ ಚಿಕ್ಕಮ್ಮ ಬಳಿ ಕುಡಿಯಲು ಹಣ ಕೇಳಿದ್ದಾನೆ. ಹಣ ನೀಡಲು ನಿರಾಕರಿಸಿದ ಕಾರಣಕ್ಕೆ ಭರತ್ ಕೋಪಗೊಂಡು ದೊಣ್ಣೆಯಿಂದ ಹೊಡೆದು, ತಲೆಯನ್ನು ಗೋಡೆಗೆ ಬಡಿದು ಪರಾರಿಯಾಗಿದ್ದಾನೆ.

ಹಲ್ಲೆಗೊಳಗಾಗಿ ಚಿಕ್ಕಮ್ಮ ಕುಸಿದು ಬಿದ್ದಿರುವುದನ್ನು ಗ್ರಾಮಸ್ಥರು ಕಂಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ (Mysuru) ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಚಿಕ್ಕಮ್ಮ ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments