Monday, September 16, 2024
Google search engine
Homeಆರೋಗ್ಯhealth tips ಈ ಪಾನೀಯಗಳು ಸೇವಿಸಿದರೆ ಲಿವರ್‌ ಸಮಸ್ಯೆ ದೂರ!

health tips ಈ ಪಾನೀಯಗಳು ಸೇವಿಸಿದರೆ ಲಿವರ್‌ ಸಮಸ್ಯೆ ದೂರ!

ಇಂದು ನಮ್ಮ ಆಹಾರ ಪದ್ಧತಿಯಲ್ಲಿ ಬಹಳಷ್ಟು ಬದಲಾವಣೆಗಳು ಆಗಿವೆ. ಕೃತಕ ರುಚಿಕಾರಕಗಳು, ಬಣ್ಣಕಾರಕಗಳೊಂದಿಗೆ ಎಣ್ಣೆಯಲ್ಲಿ ಡೀಪ್‌ ಫ್ರೈ ಮಾಡಿದ ಆಹಾರ ವಸ್ತುಗಳು, ಮೈದಾ ಉತ್ಪನ್ನಗಳು, ಸಂಸ್ಕರಿಸಿದ ಮಾಂಸ ಉತ್ಪನ್ನ, ಡೈರಿ ಉತ್ಪನ್ನಗಳ ಅತಿಯಾದ ಬಳಕೆ ನಮ್ಮ ಆಹಾರದಲ್ಲಿ ಒಳಗೊಂಡಿರುತ್ತದೆ. ಇಂಥ ಆಹಾರಗಳ ಸೇವನೆಯು ಹಲವು ಆರೋಗ್ಯ ಸಮಸ್ಯೆಗಳನ್ನು ತರುತ್ತವೆ. ಇದರಿಂದ ಬರುವ ಗಂಭೀರ ಆರೋಗ್ಯ ಸಮಸ್ಯೆಗಳಲ್ಲಿ ಲಿವರ್‌ ಡ್ಯಾಮೇಜ್‌ ಕೂಡ ಒಂದು.

ಹೀಗಾಗಿ ಪ್ರತಿಯೊಬ್ಬರು ಯಕೃತ್ ನ್ನು ನೈಸರ್ಗಿಕವಾಗಿ ಸ್ವಚ್ಛಗೊಳಿಸುವ ಪಾನೀಯಗಳ ಸೇವನೆಯನ್ನು ರೂಢಿ ಮಾಡಿಕೊಂಡರೆ ಬಹಳಷ್ಟು ಉತ್ತಮ. ಅರಶಿಣ ಆ್ಯಂಟಿಆಕ್ಸಿಡೆಂಟ್ ಮತ್ತು ರೋಗನಿರೋಧಕ ಗುಣ ಹೊಂದಿದ್ದು,  ಕೊಬ್ಬು ಜೀರ್ಣವಾಗಲು, ಪಿತ್ತರಸ ಉತ್ಪತ್ತಿ ವರ್ಧಿಸಲು ಮತ್ತು ವಿಷಕಾರಿ ಅಂಶವನ್ನು ಹೊರಗೆ ಹಾಕಲು ನೆರವಾಗುವುದು. ಚಿಟಿಕೆ ಅರಶಿಣದೊಂದಿಗೆ ಬಿಸಿ ಹಾಲಿನ ಸೇವನೆ ರೂಢಿ ಮಾಡಿಕೊಂಡರೆ ಯಕೃತ್‌ ಆರೋಗ್ಯ ರಕ್ಷಣೆಗೆ ಸಹಕಾರಿ.

ಗ್ರೀನ್‌ ಟೀಯಲ್ಲಿ ಆ್ಯಂಟಿ ಆಕ್ಸಿಡೆಂಟ್, ಪಾಲಿಫೆನಾಲ್, ವಿಟಮಿನ್ ಮತ್ತು ಫ್ಲಾವನಾಯ್ಡ್ ಇದ್ದು, ಪ್ರತಿರೋಧಕ ಶಕ್ತಿ ವೃದ್ಧಿಗೊಳಿಸಿ ಚಯಾಪಚಯ ಸಾಮರ್ಥ್ಯ ಹೆಚ್ಚಿಸಿ ತೂಕ ಇಳಿಸಲು ನೆರವಾಗುವುದು. ಪರಿಣಾಮವಾಗಿ ಫ್ಯಾಟಿ ಲಿವರ್ ಸಮಸ್ಯೆ ದೂರಗೊಳಿಸುತ್ತದೆ. ಆದರೆ ಸೇವನೆ ಮಿತ ಪ್ರಮಾಣದಲ್ಲಿರಬೇಕು. ನಿತ್ಯವೂ ಒಂದು ಕಪ್ ಶುದ್ಧ ಕಾಫಿ ಕುಡಿದರೆ ದೀರ್ಘಕಾಲಿಕವಾಗಿ ಯಕೃತ್ ಕಾಯಿಲೆಗಳ ಅಪಾಯವನ್ನು ನಿಯಂತ್ರಿಸುತ್ತದೆ. ಯಕೃತ್ ನ ಕಿಣ್ವವನ್ನು ಸ್ರವಿಸಲು ಕಾಫಿ ಸಹಕಾರಿ ಎನ್ನಲಾಗುತ್ತದೆ.

ವಿಟಮಿನ್ ಸಿ ಮತ್ತು ಆ್ಯಂಟಿ ಆಕ್ಸಿಡೆಂಟ್ ಹೊಂದಿರುವ ಲಿಂಬೆ ನೀರನ್ನು ಸೇವಿಸಿದರೆ ಯಕೃತ್ ಅನ್ನು ನಿರ್ವಿಷಗೊಳಿಸಿ ಕಿಣ್ವಗಳನ್ನು ಉತ್ಪತ್ತಿ ಮಾಡುವುದು. ಆದರೆ ಹಿತಮಿತ ಸೇವನೆ ಮುಖ್ಯ. ಯಕೃತ್ ನ ಆರೋಗ್ಯ ರಕ್ಷಣೆಯಲ್ಲಿ  ಗ್ಲಾಸ್ ಬೀಟ್ ರೂಟ್ ಜ್ಯೂಸ್ ಅದ್ಭುತ ಪಾತ್ರ ವಹಿಸುತ್ತದೆ. ಇದು ರಕ್ತವನ್ನು ಶುದ್ಧೀಕರಿಸುವುದು ಮತ್ತು ಸಂಪೂರ್ಣ ಯಕೃತ್ ನ ಕಾರ್ಯವನ್ನು ಸುಧಾರಿಸುವುದು. ಜೀರ್ಣಕ್ರಿಯೆಗೂ ಬೀಟ್‌ ರೂಟ್‌ ಉತ್ತಮ.

ನೀರಿನಲ್ಲಿ ಒಂದು ಟೀ ಸ್ಪೂನ್‌ ಮೆಂತೆ ಕಾಳು ನೆನೆಸಿ ತಿಂದರೆ ಯಕೃತ್ ಆರೋಗ್ಯ ವೃದ್ಧಿಸುವುದು ಮತ್ತು ಶುದ್ಧಿಯಾಗುವುದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments