Thursday, September 19, 2024
Google search engine
Homeತಾಜಾ ಸುದ್ದಿದುಬೈನಲ್ಲಿ 75 ವರ್ಷದಲ್ಲೇ ಅತ್ಯಧಿಕ ಮಳೆ: 28 ಭಾರತೀಯ ವಿಮಾನ ರದ್ದು!

ದುಬೈನಲ್ಲಿ 75 ವರ್ಷದಲ್ಲೇ ಅತ್ಯಧಿಕ ಮಳೆ: 28 ಭಾರತೀಯ ವಿಮಾನ ರದ್ದು!

ದುಬೈನಲ್ಲಿ ದಿಢೀರನೆ ಸುರಿದ ಭಾರೀ ಮಳೆಯಿಂದ ಜನರು ಹಾಗೂ ವಿದೇಶೀ ಪ್ರಯಾಣಿಗರು ತತ್ತರಿಸಿದ್ದು, ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ.

ಮಂಗಳವಾರ ಏಕಾಏಕಿ ಮಳೆಯಾಗಿದ್ದು ಒಂದು ವರ್ಷದಲ್ಲಿ ಆಗಬೇಕಿದ್ದ ಮಳೆ ಒಂದೇ ದಿನದಲ್ಲಿ ಸುರಿದಿದೆ. ಚಂಡಮಾರುತದ ಪರಿಣಾಮ ಈ ಮಳೆಯಾಗಿದೆ ಎಂದು ಹೇಳಲಾಗಿದೆ.

ಭಾರೀ ಮಳೆಯಿಂದಾಗಿ ಜನಜೀವನ ತತ್ತರಿಸಿದ್ದು, ಸುಮಾರು 500 ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. 28 ಭಾರತೀಯ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ರನ್ ವೇಯಲ್ಲಿ ವಿಮಾನಗಳು ಸಂಚರಿಸುತ್ತಿರುವ ದೃಶ್ಯಗಳು ಹರಿದಾಡುತ್ತಿವೆ.

ಯುಇಎ, ಓಮನ್, ಬಹರೇನ್ ಸೇರಿದಂತೆ ಹಲವು ಅರಬ್ ದೇಶಗಳಲ್ಲಿ ಭಾರೀ ಮಳೆಯಾಗಿದ್ದು, ಮಕ್ಕಳು ಸೇರಿದಂತೆ 18 ಮಂದಿ ಮೃತಪಟ್ಟಿದ್ದಾರೆ. ಹವಾಮಾನ ಇಲಾಖೆ ಪ್ರಕಾರ 1949ರ ನಂತರ ಒಂದೇ ದಿನದಲ್ಲಿ ಇಷ್ಟು ಪ್ರಮಾಣದ ಮಳೆಯಾಗಿದೆ. 1971ರಲ್ಲಿ ಯುಎಇ ಅಸ್ತಿತ್ವಕ್ಕೆ ಬಂದ ನಂತರ ಇದೇ ಮೊದಲ ಬಾರಿ ಇಷ್ಟು ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments