Saturday, November 9, 2024
Google search engine
Homeತಾಜಾ ಸುದ್ದಿವಯನಾಡು ದುರಂತ ಸಂಭವಿಸಿ ಗಂಟೆಗಳ ನಂತರ ಕೇಂದ್ರದಿಂದ ಮುನ್ಸೂಚನೆ ಬಂದಿದ್ದು: ಕೇರಳ ಸಿಎಂ ತಿರುಗೇಟು

ವಯನಾಡು ದುರಂತ ಸಂಭವಿಸಿ ಗಂಟೆಗಳ ನಂತರ ಕೇಂದ್ರದಿಂದ ಮುನ್ಸೂಚನೆ ಬಂದಿದ್ದು: ಕೇರಳ ಸಿಎಂ ತಿರುಗೇಟು

ವಯನಾಡುನಲ್ಲಿ ದುರಂತ ಸಂಭವಿಸಿದ ಹಲವು ಗಂಟೆಗಳ ನಂತರ ಕೇಂದ್ರದಿಂದ ಮುನ್ಸೂಚನೆ ಬಂದಿದ್ದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಸ್ಪಷ್ಟನೆ ನೀಡಿದ್ದಾರೆ.

ವಯನಾಡುನಲ್ಲಿ ಭಾರೀ ಮಳೆಯಾಗಲಿದ್ದು, ಭೂಕುಸಿತಗಳು ಸಂಭವಿಸುವ ಸಾಧ್ಯತೆ ಇದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ಕೇಂದ್ರ ಸಚಿವ ಅಮಿತ್ ಶಾ ಹೇಳಿಕೆ ಬೆನ್ನಲ್ಲೇ ಕೇರಳ ಸಿಎಂ ಪಿಣರಾಯ್ ತಿರುಗೇಟು ನೀಡಿದ್ದಾರೆ.

ಕೇಂದ್ರದಿಂದ ರೆಡ್ ಅಲರ್ಟ್ ಮುನ್ಸೂಚನೆ ಬಂದಿದ್ದು ಮಂಗಳವಾರ ರಾತ್ರಿ 6 ಗಂಟೆಗೆ. ಅದಾಗಲೇ ವಯನಾಡಿನಲ್ಲಿ ದುರಂತ ಸಂಭವಿಸಿ ಹಲವು ಗಂಟೆಗಳೇ ಆಗಿದ್ದವು. ಆದರೆ ಈಗ ಆರೋಪ-ಪ್ರತ್ಯಾರೋಪ ಮಾಡುತ್ತಾ ರಾಜಕೀಯ ಮಾಡುವ ಪರಿಸ್ಥಿತಿ ಅಲ್ಲ ಎಂದು ಪಿಣರಾಯ್ ಹೇಳಿದ್ದಾರೆ.

ವಯನಾಡು ದುರಂತದಲ್ಲಿ ಇದುವರೆಗೆ ಮೃತಪಟ್ಟವರ ಸಂಖ್ಯೆ 205 ದಾಟಿದೆ. ಪರಿಹಾರ ಕಾರ್ಯಾಚರಣೆ ನಡೆಯುತ್ತಿದ್ದು, 200ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರಾಜಕೀಯ ಮಾಡಲು ನನಗೆ ಆಸಕ್ತಿ ಇಲ್ಲ ಎಂದು ಅವರು ಹೇಳಿದರು.

ಕೇಂದ್ರ ಹವಾಮಾನ ಇಲಾಖೆ ಮಳೆಯಿಂದ ಹಾನಿಯಾಗಿರುವ ಪ್ರದೇಶಗಳಲ್ಲಿ 24 ಗಂಟೆಗಳ ಅವಧಿಯಲ್ಲಿ 115 ಮಿ.ಮೀ.ನಿಂದ 204 ಮಿ.ಮೀ. ಮಳೆಯಾಗಬಹುದು ಎಂದು ಮುನ್ಸೂಚನೆ ನೀಡಿತ್ತು. ಆದರೆ 372 ಮಿ.ಮೀ. ಮಳೆಯಾಗಿದೆ. ಕಳೆದ 48 ಗಂಟೆಗಳ ಅವಧಿಯಲ್ಲಿ 572 ಮಿ.ಮೀ. ಮಳೆಯಾಗಿದೆ ಅಂದರೆ ನಿರೀಕ್ಷೆಯಿಂದ ದುಪ್ಪಟ್ಟು ಹೆಚ್ಚು ಮಳೆಯಾಗಿದೆ ಎಂದು ಅವರು ವಿವರಿಸಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್ ಅಧಿವೇಶನದಲ್ಲಿ ಏನು ಹೇಳಿದ್ದಾರೋ ಅದು ನಿಜವಲ್ಲ. ಜುಲೈ 23ರಿಂದ 29ರೊಳಗೆ ಕೇಂದ್ರದಿಂದ ನಮಗೆ ಯಾವುದೇ ಮಳೆ ಅನಾಹುತದ ಮುನ್ಸೂಚನೆ ಬಂದಿಲ್ಲ. ಎರಡು ನದಿಗಳು ತುಂಬಿ ಹರಿಯುತ್ತಿದ್ದರೂ ಅದನ್ನು ಪ್ರಸ್ತಾಪಿಸಿಯೇ ಇಲ್ಲ ಎಂದು ಅವರು ಹೇಳಿದರು.

ಲೋಕಸಭೆಯಲ್ಲಿ ವಯನಾಡು ದುರಂತದ ಬಗ್ಗೆ ಉತ್ತರ ನೀಡಿದ ಅಮಿತ್ ಶಾ, ವಯನಾಡು ದುರಂತದ ಬಗ್ಗೆ ವಾರಕ್ಕೂ ಮುಂಚಿತವಾಗಿ ಅಂದರೆ ಜುಲೈ 23ರಂದು ಕೇರಳ ಸರ್ಕಾರಕ್ಕೆ ರೆಡ್ ಅಲರ್ಟ್ ಸೂಚನೆ ನೀಡಲಾಗಿತ್ತು. ಕೇಂದ್ರದ ಮುನ್ಸೂಚನೆಯನ್ನು ಕಡೆಗಣಿಸಿದ ಕೇರಳ ಸರ್ಕಾರ ಜನರನ್ನು ಸುರಕ್ಷಿತ  ಸ್ಥಳಕ್ಕೆ ಸ್ಥಳಾಂತರ ಮಾಡಿಲ್ಲ ಎಂದು ಹೇಳಿಕೆ ನೀಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments