ಹುಬ್ಬಳ್ಳಿ ಮತ್ತು ಬೆಂಗಳೂರು ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲುಗಳ ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ಹುಬ್ಬಳ್ಳಿಯ ನೈಋತ್ಯ ರೈಲ್ವೆಯ ಮುಖ್ಯಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ ಕನಮಡಿ ತಿಳಿಸಿದ್ದಾರೆ.
ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ನಿಲ್ದಾಣಗಳ ನಡುವೆ ಪ್ರತಿದಿನ ಸಂಚರಿಸುವ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ವಿಶೇಷ (ರೈಲು ಸಂಖ್ಯೆ 07339/07340) ರೈಲುಗಳ ಅವಧಿಯನ್ನು ಈಗಿರುವ ನಿಲುಗಡೆ ಮತ್ತು ಸಮಯದೊಂದಿಗೆ ವಿಸ್ತರಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ. ವಿವರಗಳು ಈ ಕೆಳಗಿನಂತಿವೆ:
ರೈಲು ಸಂಖ್ಯೆ 07339 ಎಸ್ಎಸ್ಎಸ್ ಹುಬ್ಬಳ್ಳಿ-ಕೆಎಸ್ಆರ್ಬೆಂಗಳೂರು ಡೈಲಿ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ವಿಶೇಷ ರೈಲು ಸೇವೆ ಈ ಮೊದಲು ಡಿಸೆಂಬರ್ 31, 2024 ರವರೆಗೆ ಓಡಿಸಲು ನಿಗದಿಪಡಿಸಲಾಗಿತ್ತು. ಈಗ ಜನವರಿ 1, 2025 ರಿಂದ ಜೂನ್ 30, 2025 ರವರೆಗೆ ವಿಸ್ತರಿಸಲಾಗಿದೆ.
ರೈಲು ಸಂಖ್ಯೆ 07340 ಕೆಎಸ್ಆರ್ ಬೆಂಗಳೂರು-ಎಸ್ಎಸ್ಎಸ್ ಹುಬ್ಬಳ್ಳಿ ದೈನಂದಿನ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ವಿಶೇಷ ರೈಲು ಸೇವೆ ಈ ಮೊದಲು ಜನವರಿ 1, 2025 ರವರೆಗೆ ಸಂಚರಿಸಲು ನಿಗದಿಪಡಿಸಲಾಗಿತ್ತು, ಈಗ ಜನವರಿ 2, 2025 ರಿಂದ ಜುಲೈ 1, 2025 ರವರೆಗೆ ವಿಸ್ತರಿಸಲಾಗಿದೆ.