Monday, September 16, 2024
Google search engine
Homeಕ್ರೀಡೆ3 ಸೂಪರ್ ಓವರ್: ಐತಿಹಾಸಿಕ ಪಂದ್ಯ ಗೆದ್ದು ಸಂಭ್ರಮಿಸಿದ ಹುಬ್ಬಳ್ಳಿ ಟೈಗರ್ಸ್!

3 ಸೂಪರ್ ಓವರ್: ಐತಿಹಾಸಿಕ ಪಂದ್ಯ ಗೆದ್ದು ಸಂಭ್ರಮಿಸಿದ ಹುಬ್ಬಳ್ಳಿ ಟೈಗರ್ಸ್!

ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿ 3 ಸೂಪರ್ ಓವರ್ ಕಂಡ ಪಂದ್ಯ ಎಂಬ ದಾಖಲೆಗೆ ಕರ್ನಾಟಕದ ಮಹಾರಾಜ ಟ್ರೋಫಿ ಟಿ-20 ಕ್ರಿಕೆಟ್ ಟೂರ್ನಿ ಸಾಕ್ಷಿಯಾದರೆ, ಹಾಲಿ ಚಾಂಪಿಯನ್ ಹುಬ್ಬಳ್ಳಿ ಟೈಗರ್ಸ್ ರೋಚಕ ಪಂದ್ಯ ಗೆದ್ದು ಸಂಭ್ರಮಿಸಿತು.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಬೆಂಗಳೂರು ಬ್ಲಾಸ್ಟರ್ಸ್ ಮತ್ತು ಹುಬ್ಬಳ್ಳಿ ಟೈಗರ್ಸ್ ನಡುವಿನ ಪಂದ್ಯ 3 ಸೂಪರ್ ಓವರ್ ಪಂದ್ಯಕ್ಕೆ ಸಾಕ್ಷಿಯಾಯಿತು.

ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಹುಬ್ಬಳ್ಳಿ ಟೈಗರ್ಸ್ ತಂಡ 20 ಓವರ್ ಗಳಲ್ಲಿ 164 ರನ್ ಗೆ ಆಲೌಟಾಯಿತು. ನಂತರ ಬ್ಯಾಟ್ ಮಾಡಿದ ಬೆಂಗಳೂರು ಬ್ಲಾಸ್ಟರ್ಸ್ ತಂಡ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 164 ರನ್ ಗಳಿಸಿ ಸಮಬಲ ಸಾಧಿಸಿತು.

ಬೆಂಗಳೂರು ಬ್ಲಾಸ್ಟರ್ಸ್ ತಂಡದ ನಾಯಕ ಮಯಾಂಕ್ ಅಗರ್ವಾಲ್ 34 ಎಸೆತಗಳಲ್ಲಿ 9 ಬೌಂಡರಿ ಸೇರಿದ 54 ರನ್ ಬಾರಿಸಿದರೆ, ಮೈಸೂರಿನ ಮನ್ವಂತ್ ಕುಮಾರ್ 32 ರನ್ ಗೆ 4 ವಿಕೆಟ್ ಪಡೆದು ಮಿಂಚಿದರು.

ಮೊದಲ ಸೂಪರ್ ಓವರ್ ನಲ್ಲಿ ಬೆಂಗಳೂರು ತಂಡ 1 ವಿಕೆಟ್ ಕಳೆದುಕೊಂಡು 10 ರನ್ ಗಳಿಸಿದರೆ, ಹುಬ್ಬಳ್ಳಿ ತಂಡ ಕೂಡ ಅಷ್ಟೇ ರನ್ ಗಳಿಸಿ ಮತ್ತೆ ಟೈನಲ್ಲಿ ಅಂತ್ಯಗೊಂಡಿತು. ವಿಶೇಷ ಅಂದರೆ ಎರಡೂ ತಂಡಗಳು ತಲಾ 1 ಸಿಕ್ಸರ್ ಬಾರಿಸಿದ್ದರಿಂದ ಫಲಿತಾಂಶ ನಿರ್ಣಯ ಕಠಿಣವಾಗಿ ಎರಡನೇ ಸೂಪರ್ ಓವರ್ ಆಡಿಸಲು ನಿರ್ಧರಿಸಲಾಯಿತು.

ಎರಡನೇ ಸೂಪರ್ ಓವರ್ ನಲ್ಲಿ ಹುಬ್ಬಳ್ಳಿ 8 ರನ್ ಗಳಿಸಿದರೆ, ಬೆಂಗಳೂರು ತಂಡ ಕೂಡ ಅಷ್ಟೇ ರನ್ ಗಳಿಸಿದ್ದರಿಂದ ಮತ್ತೆ ಸಮಬಲದಲ್ಲಿ ಅಂತ್ಯಗೊಂಡಿತು. ಮೂರನೇ ಸೂಪರ್ ಓವರ್ ನಲ್ಲಿ ಬೆಂಗಳೂರು ತಂಡ 1 ವಿಕೆಟ್ ಕಳೆದುಕೊಂಡು 12 ರನ್ ಗಳಿಸಿತು. ಹುಬ್ಬಳ್ಳಿ ಪರ ಮನ್ವಂತ್ ಕ್ರಾಂತಿಕುಮಾರ್ 2 ಬೌಂಡರಿ ಬಾರಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments