Thursday, September 19, 2024
Google search engine
Homeತಾಜಾ ಸುದ್ದಿವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರ ಗಮನಕ್ಕೆ ತಂದರೆ ರದ್ದಾಂತ ಆಗುತ್ತೆ:  ಲೆಕ್ಕ ಪರಿಶೋಧಕ ಪರಶುರಾಮ್- ಎಂಡಿ...

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರ ಗಮನಕ್ಕೆ ತಂದರೆ ರದ್ದಾಂತ ಆಗುತ್ತೆ:  ಲೆಕ್ಕ ಪರಿಶೋಧಕ ಪರಶುರಾಮ್- ಎಂಡಿ ಪದ್ಮನಾ‍ಭ್ ಆಡಿಯೋ ವೈರಲ್!

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಆರೋಪಿಗಳಾಗಿರುವ ಲೆಕ್ಕ ಪರಿಶೋಧಕ ಪರಶುರಾಮ್ ಮತ್ತು ಎಂಡಿ ಪದ್ಮನಾಭ್ ರಹಸ್ಯವಾಗಿ ಮಾತುಕತೆ ನಡೆಸಿರುವ ಆಡಿಯೋ ಇದೀಗ ವೈರಲ್ ಆಗಿದೆ.

ಚಂದ್ರಶೇಖರ್ ಆತ್ಮಹತ್ಯೆಗೆ ಎರಡು ದಿನ ಮುನ್ನ ಅಂದರೆ ಜೂನ್ 24ರಂದು ಲೆಕ್ಕ ಪರಿಶೋಧಕ ಪರಶುರಾಮ್ ಮತ್ತು ಎಂಡಿ ಪದ್ಮನಾಭ್ ಹೋಟೆಲೊಂದರಲ್ಲಿ ರಹಸ್ಯವಾಗಿ ಮಾತುಕತೆ ನಡೆಸಿರುವ ವೀಡಿಯೋ ವೈರಲ್ ಆಗಿದ್ದು, ಈ ಆಡಿಯೋ ಪ್ರಕಾರ ಹಗರಣದಲ್ಲಿ ಸಚಿವರು ಮತ್ತು ಶಾಸಕರ ಪಾತ್ರವಿಲ್ಲ ಎಂದು ಮೇಲ್ನೋಟಕ್ಕೆ ದೃಢಪಡುತ್ತಿದೆ.

ಅಧ್ಯಕ್ಷರ ಗಮನಕ್ಕೆ ತಂದೆ ಇದು ದೊಡ್ಡ ರದ್ದಾಂತವಾಗುತ್ತದೆ. ಆದ್ದರಿಂದ ಬ್ಯಾಂಕ್ ಸ್ಟೇಟ್ ಮೆಂಟ್ ತೋರಿಸದೇ ನಿಗಮದ ಅಧ್ಯಕ್ಷರು ಹಾಗೂ ಸಚಿವರಿಗೆ ಮಾಹಿತಿ ನೀಡಲು ಅಧಿಕಾರಿಗಳು ತಂತ್ರ ರೂಪಿಸಿದ್ದು ಆಡಿಯೋದಲ್ಲಿ ಬೆಳಕಿಗೆ ಬಂದಿದೆ.

ಪ್ರಕರಣದಲ್ಲಿ ಪದ್ಮನಾಭ್ ಎ7 ಹಾಗೂ ಪರಶುರಾಮ್ ಎ8 ಆಗಿದ್ದಾರೆ. ‘ಹಗರಣದ ವಿಚಾರ ಅಧ್ಯಕ್ಷರಿಗೆ ಹೇಳೋಣ್ವಾ’ ಎಂದು ಪರಶುರಾಮ್ ಹೇಳಿದ್ದರು. ಇದಕ್ಕುತ್ತರವಾಗಿ, ‘ಹೇಳಿದ್ರೆ ರಾದ್ಧಾಂತ ಆಗುತ್ತೆ, ಸ್ವಲ್ಪ ದಿನ ಬೇಡ’ ಎಂದು ಪದ್ಮನಾಭ್ ಹೇಳಿದ್ದರು. ಇದಾದ ಎರಡೇ ದಿನಗಳಲ್ಲಿ ಚಂದ್ರಶೇಖರ್ ಆತ್ಮಹತ್ಯೆಗೆ ಶರಣಾಗಿದ್ದರು. ಚಂದ್ರಶೇಖರ್ ಮಾರ್ಚ್ 31ರಂದು ಆದರೂ ಲೆಕ್ಕಪತ್ರದ ವಿವರ ನೀಡಿಲ್ಲ. ಅಲ್ಲದೇ 4ರಂದು ಬ್ಯಾಂಕ್ ಗೆ ಹಣ ವರ್ಗಾವಣೆ ಮಾಡಿ ಅದೇ ದಿನವೇ ವಿವರವನ್ನು ನೀಡಿರುವುದು ಪ್ರಕರಣದ ಹಿಂದೆ ಅಧಿಕಾರಿಗಳ ಕೈವಾಡ ಇರುವುದು ದೃಢಪಡುತ್ತಿದೆ.

ವೈರಲ್ ಆಡಿಯೋದಲ್ಲೇನಿದೆ?

ಅಕೌಂಟೆಂಟ್ ಪರಶುರಾಮ್ (A8); ಏನ್ ಸಾರ್ ಹೆಂಗಾಯಿತು?

ಪದ್ಮನಾಭ (A7); ಮಿನಿಸ್ಟರ್ ಕಡೆಯಿಂದ ಪ್ರೆಶರ್ ಬಂತು, ನೆಕ್ಕಂಟಿ ನಾಗರಾಜ್ ಹೇಳಿದ್ರು ನಾವು ಮಾಡಿದ್ವಿ.

ಅಕೌಂಟೆಂಟ್ ಪರಶುರಾಮ್; ಸರ್ ಇದನ್ಮು ಅಧ್ಯಕ್ಷರಿಗೆ ಹೇಳೋನೋ ಬೇಡ್ವೋ…

ಪದ್ಮನಾಭ; ಏ ಅವರಿಗೆ ಇದು ಗೊತ್ತಿಲ್ಲ, ಅಧ್ಯಕ್ಷರ ಗಮನಕ್ಕೆ ತರೋದು ಬೇಡ. ಅವರಿಗೆ ಏನಾದ್ರೂ ಗೊತ್ತಾದರೆ ದೊಡ್ಡ ರಾದ್ಧಾಂತ ಮಾಡ್ತಾರೆ.

ಅಕೌಂಟೆಂಟ್ ಪರಶುರಾಮ್; ಮಿನಿಸ್ಟರ್ ಗಮನಕ್ಕೆ ಇಲ್ವಾ?

ಪದ್ಮನಾಭ; ಆ ದಿನ ಶಾಂಗ್ರಲಾ ಹೋಟೆಲ್​ನಲ್ಲಿ ಮಂತ್ರಿಯವರು ಕರೆಸಿ ಹೇಳಲಿಲ್ವಾ?

ಪರಶುರಾಮ್: ಸರ್…. ಇದರಿಂದ ಹೊರಗೆ ಬರೋದು ಹೇಗೆ ಸರ್? ದುಡ್ಡು ಕಟ್ಲಿಲ್ಲಾ ಅಂದ್ರೆ ಸರ್, ನಾನು ನಿಮ್ಮ ಕಾಲು ಹಿಡ್ಕೊಳ್ತೀನಿ ಸರ್… ನಾನು ನಿಮ್ಮನ್ನ ನಂಬಿದ್ದೇನೆ. ನೀವೇ ನಮ್ಮ ಜತೆ ಇರಬೇಕು.

ಪದ್ಮನಾಭ:  ಮೂರು ದಿನ ಅಡ್ಜೆಸ್ಟ್ ಮಾಡಿ. ಅಷ್ಟರಲ್ಲಿ ಎಲ್ಲಾ ರೆಡಿ ಮಾಡೋಕೆ ಹೇಳ್ತೀನಿ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments