ನವದೆಹಲಿ: ಸ್ಥಿರವಾದ ಜಾಗತಿಕ ಬೆಳವಣಿಗೆಯ ಹೊರತಾಗಿಯೂ 2025ರಲ್ಲಿ ಭಾರತದ ಆರ್ಥಿಕತೆಯು ದುರ್ಬಲಗೊಳ್ಳುವ ನಿರೀಕ್ಷೆಯಿದೆ ಎಂದು ಐಎಂಎಫ್ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜೀವಾ ಎಚ್ಚರಿಕೆ ನೀಡಿದ್ದಾರೆ.
ಮುಖ್ಯವಾಗಿ ಅಮೆರಿಕದ ವ್ಯಾಪಾರ ನೀತಿಯ ಸುತ್ತ ಈ ವರ್ಷ ಜಗತ್ತಿನಲ್ಲಿ ಸಾಕಷ್ಟು ಅನಿಶ್ಚಿತತೆಯನ್ನು ನಿರೀಕ್ಷಿಸುವುದಾಗಿ ಜಾರ್ಜೀವಾ ಹೇಳಿದರು.
ಜಾಗತಿಕ ಬೆಳವಣಿಗೆಯು 2025ರಲ್ಲಿ ಸ್ಥಿರವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ, ಆದರೆ ಪ್ರಾದೇಶಿಕ ಮಟ್ಟದಲ್ಲಿ ಸಾಕಷ್ಟು ವ್ಯತ್ಯಾಸಗಳನ್ನು ನಿರೀಕ್ಷಿಸಲಾಗಿದೆ ಎಂದು ಅವರು ಹೇಳಿದರು.
2025ರಲ್ಲಿ ಭಾರತದ ಆರ್ಥಿಕತೆಯು ದುರ್ಬಲವಾಗಲಿದೆ ಎಂಬ ನಿರೀಕ್ಷೆ ಇದೆ ಎಂದು ಜಾರ್ಜೀವಾ ಹೇಳಿದರು. ಆದರೆ ಎಷ್ಟರಮಟ್ಟಿಗೆ ದುರ್ಬಳವಾಗಲಿದೆ ಎಂಬುದನ್ನುಅ ವರು ವಿವರಿಸಿಲ್ಲ.
“ನಾವು ನಿರೀಕ್ಷಿಸಿದ್ದಕ್ಕಿಂತ ಯುಎಸ್ ಸ್ವಲ್ಪ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ, ಇಯು ಸ್ವಲ್ಪಮಟ್ಟಿಗೆ ಸ್ಥಗಿತಗೊಂಡಿದೆ, ಮತ್ತು ಭಾರತ ದುರ್ಬಲವಾಗಿದೆ” ಎಂದು ಅವರು ಹೇಳಿದರು. ಬ್ರೆಜಿಲ್ ಸ್ವಲ್ಪ ಹೆಚ್ಚಿನ ಹಣದುಬ್ಬರವನ್ನು ಎದುರಿಸುತ್ತಿದೆ ಎಂದೂ ಅವರು ಹೇಳಿದರು.
ಸಿಪ್‌ಗಳ ಮಾರಾಟದಲ್ಲಿ ಏರಿಕೆ
ಈಕ್ವಿಟಿ ಮಾರುಕಟ್ಟೆಯ ಏರಿಳಿತದ ಮಧ್ಯೆ ಹೂಡಿಕೆದಾರರು ಮ್ಯೂಚುವಲ್ ಫಂಡ್ (ಎಂಎಫ್) ಸಿಪ್ ಖಾತೆಗಳನ್ನು ದಾಖಲೆಯ ವೇಗದಲ್ಲಿ ಮುಚ್ಚುತ್ತಿದ್ದಾರೆ.ಕಳೆದ ಡಿಸೆಂಬರಲ್ಲಿ, 4.5 ದಶಲಕ್ಷ ಸಿಪ್‌ಗಳನ್ನು ಮಾರಾಟ ಮಾಡಲಾಗಿದೆ ಎಂಬ ಅಂಕಿ-ಅಂಶ ಲಭ್ಯವಾಗಿದೆ. ಕಳೆದ ಮೇ ತಿಂಗಳಲ್ಲಿ 4.4 ದಶಲಕ್ಷ ಸಿಪ್‌ಗಳ ಮಾರಾಟವಾಗಿತ್ತು ಈಗ ಆ ಮಿತಿ ಮೀರಿದೆ.
ಸಿಪ್‌ಗಳ ಮಾರಾಟ ಮತ್ತು ಮಾರುಕಟ್ಟೆ ತಿದ್ದುಪಡಿಯ ಹೊರತಾಗಿಯೂ ಹೂಡಿಕೆಯ ಒಳಹರಿವಿನ ಮೇಲೆ ಪರಿಣಾಮ ಆಗಿಲ್ಲ ಎನ್ನಲಾಗಿದೆ.
ಎಸ್‌ಐಪಿಗಳ ಮೂಲಕ ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ದಾಖಲೆಯ 26,459 ಕೋಟಿ ರೂ.ಗಳನ್ನು (264.59 ಶತಕೋಟಿ ಡಾಲರ್) ಹೂಡಿದ್ದಾರೆ. ಸಿಪ್‌ಗಳ ಮಾರಾಟ ಪ್ರಕ್ರಿಯೆಯು ಹೊಸ ಸಿಪ್ ಖರೀದಿಯ ಮೇಲೆ ಪ್ರತಿಕೂಲ ಪ್ರಭಾವ ಬೀರಿಸ್ದು. ಡಿಸೆಂಬರಲ್ಲಿ ಕೇವಲ 9 ಲಕ್ಷ ಹೊಸ ಸಿಪ್ ಖರೀದಿಯಷ್ಟೇ ನಡೆದಿದೆ. ಇದು ಏಳು ತಿಂಗಳಲ್ಲಿ ಕನಿಷ್ಠ ಪ್ರಮಾಣವಾಗಿದೆ.
ಮೂಲಾಧಾರ ನಿಫ್ಟಿ 50 ಸೂಚ್ಯಂಕವು ಡಿಸೆಂಬರ್‌ನಲ್ಲಿ ಕುಸಿತದಲ್ಲಿ ಕೊನೆಗೊಂಡಿತು, ಸೂಚ್ಯಂಕವು ಸತತ ಮೂರನೇ ಮಾಸಿಕದಲ್ಲಿ ಕುಸಿತ ದಾಖಲಿಸಿತು.
ಸೂಚ್ಯಂಕವು ಕಳೆದ ತಿಂಗಳು ಶೇಕಡಾ 2ರಷ್ಟು ಕುಸಿದಿದೆ ಮತ್ತು ಸೆಪ್ಟೆಂಬರಲ್ಲಿ ಸಾರ್ವಕಾಲಿಕ ಗರಿಷ್ಠದಿಂದ ಶೇಕಡಾ 10ಕ್ಕಿಂತ ಕಡಿಮೆಯಾಗಿದೆ. ಮೊಟುಕುಗೊಂಡ ಸಿಪ್‌ಗಳ ಸಂಖ್ಯೆ ಹೆಚ್ಚಿದ್ದರೂ, ಹೊಸ ಸಿಪ್‌ಗಳ ಸಂಖ್ಯೆ ಜುಲೈ 2024 ರಲ್ಲಿ 7.3 ದಶಲಕ್ಷ ತಲುಪಿದ ನಂತರ ನಿಧಾನಗೊಂಡಿದೆ. ಡಿಸೆಂಬರಲ್ಲಿ 5.4 ದಶಲಕ್ಷ ಹೊಸ ಎಸ್‌ಐಪಿಗಳು ನೋಂದಣಿಯಾಗಿವೆ.