Friday, October 18, 2024
Google search engine
Homeತಾಜಾ ಸುದ್ದಿಭಾರತ- ಕೆನಡಾ ರಾಜತಾಂತ್ರಿಕ ಬಿಕ್ಕಟ್ಟು ಉಲ್ಬಣ: ರಾಯಭಾರಿಗಳು ಮರಳಲು ಎರಡೂ ದೇಶಗಳ ಸೂಚನೆ!

ಭಾರತ- ಕೆನಡಾ ರಾಜತಾಂತ್ರಿಕ ಬಿಕ್ಕಟ್ಟು ಉಲ್ಬಣ: ರಾಯಭಾರಿಗಳು ಮರಳಲು ಎರಡೂ ದೇಶಗಳ ಸೂಚನೆ!

ಕೆನಡಾ ರಾಯಭಾರಿಗಳು ದೇಶವನ್ನು ತೊರೆಯಲು ಭಾರತ ಸೂಚನೆ ನೀಡಿದ ಬೆನ್ನಲ್ಲೇ ಕೆನಡಾ ಸರ್ಕಾರ ಕೂಡ ಭಾರತದ ರಾಯಭಾರ ಕಚೇರಿ ಎಲ್ಲಾ ಸಿಬ್ಬಂದಿಯನ್ನೂ ಸ್ವದೇಶಕ್ಕೆ ಮರಳುವಂತೆ ಸೂಚಿಸಿದೆ. ಈ ಮೂಲಕ ಎರಡೂ ದೇಶಗಳ ನಡುವಣ ರಾಜತಾಂತ್ರಿಕ ಬಿಕ್ಕಟ್ಟು ಉಲ್ಬಣಗೊಂಡಿದೆ.

ಸಿಖ್ ಪ್ರತ್ಯೇಕತಾವಾದಿಯ ಹತ್ಯೆ ಪ್ರಕರಣದ ಕುರಿತು ತನಿಖೆ ನಡೆಸುವುದಾಗಿ ಭಾರತದಲ್ಲಿನ ಕೆನಡಾ ರಾಯಭಾರಿ ಹೇಳಿಕೆ ನೀಡಿದ್ದರಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕೇಂದ್ರ ಸರ್ಕಾರ ಶನಿವಾರದೊಳಗೆ ದೇಶ ತೊರೆಯುವಂತೆ ಕೆನಡಾ ರಾಯಭಾರ ಕಚೇರಿ 6 ಸಿಬ್ಬಂದಿಗೆ ಗಡುವು ನೀಡಿತು.

ಭಾರತದ ಕ್ರಮದ ಬೆನ್ನಲ್ಲೇ ದಾಳಿಗೆ ಪ್ರತಿದಾಳಿ ಎಂಬಂತೆ ಕೆನಡಾ ಸರ್ಕಾರ ಕೂಡಲೇ ದೇಶದಲ್ಲಿ ಕೋಮುಗಲಭೆಯ ಅಭಿಯಾನಕ್ಕೆ ಪ್ರಚೋದನೆ ನೀಡುತ್ತಿದ್ದಾರೆ ಎಂಬ ಆರೋಪದ ಮೇಲೆ ಭಾರತದ ರಾಯಭಾರ ಕಚೇರಿಯ 6 ಸಿಬ್ಬಂದಿಯನ್ನು ದೇಶ ತೊರೆಯುವಂತೆ ಸೂಚಿಸಿದೆ.

2024 ಅಕ್ಟೋಬರ್ 19 ಶನಿವಾರ ಬೆಳಿಗ್ಗೆ 11.59ರೊಳಗೆ ಭಾರತವನ್ನು ತೊರೆಯುವಂತೆ ಕೆನಡಾ ಅಧಿಕಾರಿಗಳಾದ ಹಂಗಾಮಿ ಹೈಕಮಿಷನರ್ ಸ್ಟುವರ್ಟ್ ರಾಸ್ ವ್ಹೀಲರ್, ಸಹಾಯಕ ಹೈಕಮಿಷನರ್ ಪ್ಯಾಟ್ರಿಕ್ ಹೈಬರ್ಟ್ ಸೇರಿದಂತೆ 6 ಮಂದಿ ಅಧಿಕಾರಿಗಳಿಗೆ ಕೇಂದ್ರ ಸರ್ಕಾರ ಗಡುವು ನೀಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments