ಅತ್ಯಂತ ವೇಗವಾಗಿ ಚಿಮ್ಮುವ ಹೈಪರ್ ಸಾನಿಕ್ ದೂರಗಾಮಿ ಕ್ಷಿಪಣಿಯನ್ನು ಭಾರತ ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿದೆ. ಈ ಸಾಧನೆ ಮಾಡಿದ ಕೆಲವೇ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಸ್ಥಾನ ಪಡೆದಿದೆ.
ಡಿಆರ್ ಡಿಒ ಮತ್ತು ಕೆಲವು ಸಂಸ್ಥೆಗಳ ಜೊತೆ ಕೈ ಜೋಡಿಸಿ ಅಭಿವೃದ್ಧಿಪಡಿಸಲಾದ ಹೈಪರ್ ಸಾನಿಕ್ ಕ್ಷಿಪಣಿಯನ್ನು ಹೈದರಾಬಾದ್ ನ ಎಪಿಜೆ ಅಬ್ದುಲ್ ಕಲಾಂ ಬಾಹ್ಯಕಾಶ ನಿಲ್ದಾಣದಲ್ಲಿ ಶನಿವಾರ ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಲಾಗಿದೆ.
ಶಬ್ಧಕ್ಕಿಂತ 5 ಪಟ್ಟು ವೇಗವಾಗಿ ಅಂದರೆ ಸುಮಾರು 6,125 ಕಿ.ಮೀ.ನಿಂದ ಗರಿಷ್ಠ 24,140 ಕಿ.ಮೀ. ವೇಗದವರೆಗೆ ಗರಿಷ್ಠ ವೇಗದಲ್ಲಿ ಈ ಹೈಪರ್ ಸಾನಿಕ್ ಕ್ಷಿಪಣಿ ಗುರಿ ತಲುಪಲಿದೆ. ಈ ಮೂಲಕ ಎದುರಾಳಿಗಳು ಈ ಕ್ಷಿಪಣಿಯ ದಾಳಿಯನ್ನು ಗುರುತಿಸುವುದೂ ಕೂಡ ಕಷ್ಟವಾಗಲಿದೆ.
ಹೈಪರ್ ಸಾನಿಕ್ ಗೈಡ್ ವಾಹನ ಮತ್ತು ಹೈಪರ್ ಸಾನಿಕ್ ಕ್ರೂಸರ್ ಕ್ಷಿಪಣಿ ಎಂಬ ಎರಡು ಮಾದರಿ ಅಭಿವೃದ್ಧಿಪಡಿಸಲಾಗಿದ್ದು, ರಾಕೆಟ್ ಬೂಸ್ಟರ್ ಮೂಲಕ ಹೈಪರ್ ಸಾನಿಕ್ ಗೈಡ್ ವಾಹನದ ಉಡಾವಣೆಗೊಳ್ಳುವ ಕ್ಷಿಪಣಿ ನಂತರ ತನ್ನ ವೇಗ ಹೆಚ್ಚಿಸಿಕೊಂಡು ಗುರಿ ತಲುಪಲಿದೆ. ಹೈಪರ್ ಸಾನಿಕ್ ಕ್ರೂಸರ್ ಕ್ಷಿಪಣಿ ಉಡಾವಣೆಗೊಂಡ ಕೆಲವೇ ಕ್ಷಣಗಳಲ್ಲಿ ಗರಿಷ್ಠ ವೇಗದಲ್ಲಿ ಹಾರಾಟ ನಡೆಸಲಿದೆ.