Sunday, September 8, 2024
Google search engine
Homeತಾಜಾ ಸುದ್ದಿಇಂಡಿಯನ್-2 ಚಿತ್ರ ಮೊದಲ ದಿನ 26 ಕೋಟಿ ಗಳಿಕೆ

ಇಂಡಿಯನ್-2 ಚಿತ್ರ ಮೊದಲ ದಿನ 26 ಕೋಟಿ ಗಳಿಕೆ

ಕಮಲ್ ಹಾಸನ್ ಮತ್ತು ಶಂಕರ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ಇಂಡಿಯನ್-2 ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮೊದಲ ದಿನ 26 ಕೋಟಿ ಗಳಿಸಿದೆ.

ಹಲವು ಭಾಷೆಗಳಲ್ಲಿ ಏಕಕಾಲದಲ್ಲಿ ದೇಶಾದ್ಯಂತ ಬಿಡುಗಡೆ ಆದ ಇಂಡಿಯನ್-2 ಭಾರೀ ನಿರೀಕ್ಷೆ ಮೂಡಿಸಿತ್ತು. ಆದರೆ ಮೊದಲ ದಿನದ ಪ್ರತಿಕ್ರಿಯೆ ನಿರೀಕ್ಷೆಗಿಂತ ಕಡಿಮೆ ಆಗಿದೆ.

ಅಕ್ಷಯ್ ಕುಮಾರ್ ನಟಿಸಿದ ತಮಿಳಿನ ರಿಮೇಕ್ ಚಿತ್ರ ಸರ್ಫಿರಾ ಜೊತೆ ಇಂಡಿಯನ್-2 ಪೈಪೋಟಿ ಮಾಡಬೇಕಿದ್ದು, ಎರಡೂ ಚಿತ್ರಗಳು ಒಂದೇ ದಿನ ಬಿಡುಗಡೆ ಆಗಿವೆ.

ಇಂಡಿಯನ್-2 ಚಿತ್ರ 26 ಕೋಟಿ ಗಳಿಸಿದ್ದರಲ್ಲಿ ತಮಿಳಿನಲ್ಲಿ 17 ಕೋಟಿ ಹಾಗೂ ತೆಲುಗಿನಲ್ಲಿ 7.9 ಕೋಟಿ ಅತೀ ಹೆಚ್ಚು ಬಂದಿದ್ದು ಹೊರತುಪಡಿಸಿದರೆ, ಹಿಂದಿಯಲ್ಲಿ ಕೇವಲ 1.1 ಕೋಟಿ ಹಾಗೂ ಇತರೆ ಭಾಷೆಗಳಲ್ಲಿ ಅದಕ್ಕಿಂತ ಕಡಿಮೆ ಮೊತ್ತ ಗಳಿಸಿದೆ.

ಕಮಲ್ ಹಾಸನ್ ಈ ಚಿತ್ರಕ್ಕಾಗಿ ಸಾಕಷ್ಟು ಶ್ರಮ ವಹಿಸಿದ್ದಾರೆ. ಅಲ್ಲದೇ ಶಂಕರ್ ಸಾಕಷ್ಟು ಅಡಚಣೆಗಳ ನಡುವೆ ಚಿತ್ರ ನಿರ್ದೇಶಿಸಿದ್ದು, ಇಂಡಿಯನ್-2 ಚಿತ್ರದ ಕೊನೆಯಲ್ಲಿ ಇಂಡಿಯನ್ -3 ಚಿತ್ರದ ಟ್ರೇಲರ್ ಕೂಡ ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಅಚ್ಚರಿ ನೀಡಲಾಗಿದೆ.

ಇಂಡಿಯನ್ ಚಿತ್ರದಲ್ಲಿನ ತಾಂತ್ರಿಕ ದೋಷ ಸೇರಿದಂತೆ ಏನೆಲ್ಲಾ ತಪ್ಪುಗಳು ಆಗಿದ್ದವು ಅದನ್ನು ಇಂಡಿಯನ್ -2ನಲ್ಲಿ ಸರಿಪಡಿಸಲಾಗಿದೆ. ಅಲ್ಲದೇ ತಾಂತ್ರಿಕವಾಗಿ ಸಾಕಷ್ಟು ಉತ್ತಮವಾಗಿದೆ. ನಾವು ಏನೆ ಕಷ್ಟ ಪಟ್ಟರೂ ಚಿತ್ರ ಯಶಸ್ವಿಯಾದಾಗ ನೋವೆಲ್ಲಾ ಮರೆತು ಹೋಗುತ್ತದೆ ಎಂದು ಕಮಲ್ ಹಾಸನ್ ಹೇಳಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments