Thursday, September 19, 2024
Google search engine
Homeತಾಜಾ ಸುದ್ದಿಇಂಡಿಯನ್-2 ಚಿತ್ರದ ಪೋಸ್ಟರ್ ಬಿಡುಗಡೆ: ಬಿಡುಗಡೆಯ ದಿನಾಂಕ ಫಿಕ್ಸ್!

ಇಂಡಿಯನ್-2 ಚಿತ್ರದ ಪೋಸ್ಟರ್ ಬಿಡುಗಡೆ: ಬಿಡುಗಡೆಯ ದಿನಾಂಕ ಫಿಕ್ಸ್!

ನಟ ಕಮಲ್ ಹಾಸನ್ ನಟಿಸಿ ಶಂಕರ್ ನಿರ್ದೇಶನದ ಬಹು ನಿರೀಕ್ಷಿತ ಇಂಡಿಯನ್-2 ಚಿತ್ರದ ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು, ತೆರೆಯ ಮೇಲೆ ಚಿತ್ರ ಬಿಡುಗಡೆಯ ದಿನಾಂಕ ಘೋಷಿಸಲಾಗಿದೆ.

ಕಮಲ್ ಹಾಸನ್ ಎಕ್ಸ್ ನಲ್ಲಿ ಚಿತ್ರದ ಹೊಸ ಪೋಸ್ಟರ್ ಪೋಸ್ಟ್ ಮಾಡಿದ್ದು, ಜುಲೈ 12ರಂದು ಚಿತ್ರ ಬಿಡುಗಡೆ ಆಗಲಿದೆ ಎಂಬ ಸುದ್ದಿಯನ್ನು ಪ್ರಕಟಿಸಿದ್ದಾರೆ.

ಮೊನಿಶಾ ಕೊಯಿರಾಲಾ, ಊರ್ಮಿಳಾ ಮಾತೊಂಡ್ಕರ್ ಜೊತೆ ಕಮಲ್ ಹಾಸನ್ ನಟಿಸಿದ್ದ ಇಂಡಿಯನ್ ಚಿತ್ರ ಸೂಪರ್ ಹಿಟ್ ಆಗಿತ್ತು. ಭ್ರಷ್ಟಾಚಾರ ಕತೆ ಹೊಂದಿದ್ದ ಈ ಚಿತ್ರ ಗಳಿಕೆಯಲ್ಲಿ ದಾಖಲೆ ಬರೆದಿತ್ತು. ಇದೀಗ ಚುನಾವಣೆ, ಮತದಾನ ಕುರಿತ ಕಥಾ ಸಾರಂಶ ಹೊಂದಿರುವ ಇಂಡಿಯನ್-2 ಕುತೂಹಲ ಕೆರಳಿಸಿದೆ.

ಪೋಸ್ಟರ್ ನಲ್ಲಿ ಕಮಲ್ ಹಾಸನ್ ಬಿಳಿ ಬಣ್ಣದ ತಲೆಗೂದಲು, ಹಳೆಯ ಮುದುಕನ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಏಕ್ ಹಿಂದೂಸ್ತಾನಿ, ಏಕ್ ವೋಟ್, ಏಕ್ ಆವಾಜ್ (ಒಂದು ದೇಶ, ಒಂದು ಮತ, ಒಂದು ಧ್ವನಿ) ಘೋಷವಾಕ್ಯದೊಂದಿಗೆ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments