ಕೆಎಲ್ ರಾಹುಲ್, ರಿಷಭ್ ಪಂತ್, ಮೊಹಮದ್ ಶಮಿ, ಶ್ರೇಯಸ್ ಅಯ್ಯರ್ ಐಪಿಎಲ್ ಆಡಳಿತ ಮಂಡಳಿ ಶುಕ್ರವಾರ ಪ್ರಕಟಿಸಿದ 2025ರ ಪರಿಷ್ಕೃತ 574 ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಐಪಿಎಲ್ ಪ್ರಕಟಿಸಿದ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಾಶಸ್ತ್ಯ ಆಟಗಾರರ ಪಟ್ಟಿಯಾಗಿ ವಿಂಗಡಿಸಲಾಗಿದ್ದು, ಮೊದಲ ಪ್ರಾಶಸ್ತ್ಯ ಪಟ್ಟಿಯಲ್ಲಿ ಶ್ರೇಯಸ್ ಅಯ್ಯರ್ ಮತ್ತು ರಿಷಭ್ ಪಂತ್ ಸ್ಥಾನ ಪಡೆದಿದ್ದರೆ, ಎರಡನೇ ಪ್ರಾಶಸ್ತ್ಯ ಪಟ್ಟಿಯಲ್ಲಿ ಕೆಎಲ್ ರಾಹುಲ್, ಮೊಹಮದ್ ಶಮಿ ಸ್ಥಾನ ಗಳಿಸಿದ್ದಾರೆ.
ನವೆಂಬರ್ 24ರಂದು ಮಧ್ಯಾಹ್ನ 3 ಗಂಟೆಗೆ ಹರಾಜು ಪ್ರಕ್ರಿಯೆ ಆರಂಭವಾಗಲಿದ್ದು, 574 ಆಟಗಾರರಲ್ಲಿ 366 ಭಾರತೀಯ, 208 ವಿದೇಶೀ ಹಾಗೂ 3 ಸಹಸದಸ್ಯ ತಂಡಗಳ ಆಟಗಾರರು ಸ್ಥಾನ ಪಡೆದಿದ್ದಾರೆ. 318 ಭಾರತೀಯ ಹಾಗೂ 12 ವಿದೇಶೀ ಆಟಗಾರರು ಅಂತಾರಾಷ್ಟ್ರೀಯ ಪಂದ್ಯವಾಡದ ಕ್ರಿಕೆಟಿಗರಾಗಿದ್ದಾರೆ.
ಐಪಿಎಲ್ ಫ್ರಾಂಚೈಸಿಗಳು ಖರೀದಿಸಲು 204 ಆಟಗಾರರ ಅವಶ್ಯಕತೆ ಇದ್ದು, ಇದರಲ್ಲಿ 70 ವಿದೇಶೀ ಆಟಗಾರರಿಗೆ ಅವಕಾಶವಿದೆ. ಪಟ್ಟಿಯಲ್ಲಿ ಸ್ಥಾನ ಪಡೆದ 80 ಕ್ರಿಕೆಟಿಗರು ಗರಿಷ್ಠ 2 ಕೋಟಿ ರೂ. ಗರಿಷ್ಠ ಮೂಲಧನ ನಿಗದಿಯಾಗಿದೆ.