Wednesday, November 6, 2024
Google search engine
Homeಕ್ರೀಡೆಐಪಿಎಲ್ ಹರಾಜು ಸ್ಥಳ, ಸಮಯ ಘೋಷಣೆ: 1574 ಆಟಗಾರರ ಪಟ್ಟಿ ಬಿಡುಗಡೆ!

ಐಪಿಎಲ್ ಹರಾಜು ಸ್ಥಳ, ಸಮಯ ಘೋಷಣೆ: 1574 ಆಟಗಾರರ ಪಟ್ಟಿ ಬಿಡುಗಡೆ!

ಐಪಿಎಲ್ ಟಿ-20 ಟೂರ್ನಿಯ ಹರಾಜು ಪ್ರಕ್ರಿಯೆ ಸೌದಿ ಅರೆಬಿಯಾದ ಜೆಡ್ಡಾಹ್ ನಲ್ಲಿ ನವೆಂಬರ್ 24 ಮತ್ತು 25ರಂದು ನಡೆಯಲಿದೆ.

ಐಪಿಎಲ್ ಫ್ರಾಂಚೈಸಿಗಳು ಆಟಗಾರರನ್ನು ಉಳಿಸಿಕೊಳ್ಳಲು ನೀಡಲಾಗಿದ್ದ ಗಡುವು ನವೆಂಬರ್ 4ರಂದು ಅಂತ್ಯಗೊಂಡಿದೆ. ಈ ಹಿನ್ನೆಲೆಯಲ್ಲಿ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿರುವ 1574 ಆಟಗಾರರ ಪಟ್ಟಿಯನ್ನು ಕೂಡ ಮಂಗಳವಾರ ಬಿಡುಗಡೆ ಮಾಡಲಾಗಿದೆ.

ಐಪಿಎಲ್ 2025ರ ಹರಾಜು ಪ್ರಕ್ರಿಯೆಗೆ ಸಹಿ ಹಾಕಿದ ಆಟಗಾರರ ಪಟ್ಟಿ ಬಿಡುಗಡೆ ಮಾಡಲಾಗಿದ್ದು, 409 ವಿದೇಶಿ ಹಾಗೂ 1165 ಸ್ವದೇಶೀ ಆಟಗಾರರು ಸೇರಿದಂತೆ ಒಟ್ಟಾರೆ 1574 ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಹರಾಜು ಪ್ರಕ್ರಿಯೆಯಲ್ಲಿ ಕಾಣಿಸಿಕೊಳ್ಳುವ ಆಟಗಾರರ ಪೈಕಿ 320 ಅಂತಾರಾಷ್ಟ್ರೀಯ ಪಂದ್ಯವಾಡಿದ 1224 ಅಂತಾರಾಷ್ಟ್ರೀಯ ಪಂದ್ಯವಾಡದ ಯುವ ಆಟಗಾರರು ಹಾಗೂ 30 ಸಹ ಸದಸ್ಯ ರಾಷ್ಟ್ರಗಳ ಆಟಗಾರರು ಇದ್ದಾರೆ.

ಆಟಗಾರರ ವಿವರ:

ಕ್ಯಾಪ್ಡ್ ಭಾರತೀಯ ಆಟಗಾರರು- 48 ಅಂತಾರಾಷ್ಟ್ರೀಯ ಕ್ಯಾಪ್ಡ್ ಆಟಗಾರರು- 272, ಹಿಂದಿನ ಐಪಿಎಲ್ ಸೀಸನ್‌ಗಳ ಭಾಗವಾಗಿದ್ದ ಅನ್‌ಕ್ಯಾಪ್ಡ್ ಭಾರತೀಯರು- 152, ಹಿಂದಿನ ಐಪಿಎಲ್ ಸೀಸನ್‌ಗಳ ಭಾಗವಾಗಿದ್ದ ಅನ್‌ಕ್ಯಾಪ್ಡ್ ವಿದೇಶೀ ಆಟಗಾರರು- 3, ಅನ್‌ಕ್ಯಾಪ್ಡ್ ಭಾರತೀಯರು -965, ಅನ್‌ಕ್ಯಾಪ್ಡ್ ವಿದೇಶೀ ಆಟಗಾರರು -104.

ಪ್ರತಿ ಫ್ರಾಂಚೈಸಿಯು 25 ಆಟಗಾರರ ಗರಿಷ್ಠ ತಂಡವನ್ನು ಹೊಂದಬಹುದು. IPL 2025 ಆಟಗಾರರ ಹರಾಜಿನಲ್ಲಿ 204 ಸ್ಲಾಟ್‌ಗಳನ್ನು ಪಡೆದುಕೊಳ್ಳಲಾಗುವುದು.

ಯಾವ ದೇಶದಿಂದ ಎಷ್ಟು ಆಟಗಾರರು:

ದಕ್ಷಿಣ ಆಫ್ರಿಕಾ – 91, ಆಸ್ಟ್ರೇಲಿಯಾ – 76, ಇಂಗ್ಲೆಂಡ್ – 52, ನ್ಯೂಜಿಲೆಂಡ್ – 39, ವೆಸ್ಟ್ ಇಂಡೀಸ್ 33, ಅಫ್ಘಾನಿಸ್ತಾನ – 29, ಶ್ರೀಲಂಕಾ – 29, ಬಾಂಗ್ಲಾದೇಶ – 13 , ನೆದರ್ಲ್ಯಾಂಡ್ಸ್ – 12, ಯುಎಸ್ಎ – 10, ಐರ್ಲೆಂಡ್ – 9, ಜಿಂಬಾಬ್ವೆ – 8, ಕೆನಡಾ – 4, ಸ್ಕಾಟ್ಲೆಂಡ್ – 2, ಯುಎಇ – 1, ಇಟಲಿ – 1.

ಐಪಿಎಲ್ 2025 ರ ಹರಾಜನ್ನು ಮೆಗಾ ಒನ್ ಆಗಿ ಹೊಂದಿಸಲಾಗಿದ್ದು, ರಿಷಭ್ ಪಂತ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಮತ್ತು ಅರ್ಷ್‌ದೀಪ್ ಸಿಂಗ್ ಅವರಂತಹ ಉನ್ನತ ಮಟ್ಟದ ಭಾರತದ ಸ್ಟಾರ್‌ಗಳನ್ನು ಸುತ್ತಿಗೆಗೆ ಹೋಗಲು ಹೊಂದಿಸಲಾಗಿದೆ. ಲಭ್ಯವಿರುವ ಗರಿಷ್ಠ 204 ಸ್ಲಾಟ್‌ಗಳಿಗೆ ಖರ್ಚು ಮಾಡಲು 10 ಫ್ರಾಂಚೈಸಿಗಳು ಒಟ್ಟಾರೆಯಾಗಿ ಸುಮಾರು 641.5 ಕೋಟಿ ರೂ. ಆ 204 ಸ್ಲಾಟ್‌ಗಳಲ್ಲಿ 70 ಸ್ಲಾಟ್‌ಗಳನ್ನು ಸಾಗರೋತ್ತರ ಆಟಗಾರರಿಗೆ ಮೀಸಲಿಡಲಾಗಿದೆ. ಸದ್ಯಕ್ಕೆ 46 ಆಟಗಾರರನ್ನು 10 ಫ್ರಾಂಚೈಸಿಗಳು 558.5 ಕೋಟಿ ರೂ.ಗಳ ಸಂಚಿತ ವೆಚ್ಚದೊಂದಿಗೆ ಉಳಿಸಿಕೊಂಡಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments