ಸೊಸೆಗೆ ಟಿವಿ ನೋಡಲು ಬಿಡದೇ ಇರುವುದು, ಕಾರ್ಪೆಟ್ ಮಲಗಲು ಹೇಳುವುದು ಮುಂತಾದ ವಿಷಯಗಳು ಕ್ರೂರತೆ ಅಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಗಂಡನ ಮನೆಯಲ್ಲಿ ನೀಡಿದ ಹಿಂಸೆಯನ್ನು ತಾಳಲಾರದೇ 20 ವರ್ಷದ ಯುವತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಪತಿ ಹಾಗೂ ಅವರ ಕುಟುಂಬವನ್ನು ನಿರ್ದೋಷಿ ಎಂದು ಅಲಹಾಬಾದ್ ಹೈಕೋರ್ಟ್ ಬಿಡುಗಡೆ ಮಾಡಿದೆ.
ಪತ್ನಿಯಾಗಿ ಗಂಡನ ಮನೆಯವರಿಗೆ ನಿರ್ದಿಷ್ಟ ಸೇವೆ ಮಾಡಬೇಕು. ದೇವಸ್ಥಾನಕ್ಕೆ ಒಬ್ಬಳೇ ಹೋಗಬಾರದು. ನೆಲದ ಮೇಲೆ ಮಲಗಬೇಕು. ಟಿವಿ ನೋಡದಂತೆ ನೋಡಿಕೊಳ್ಳುವುದು ಕ್ರೂರತನ ಅಲ್ಲ. ಇದು ಕಾನೂನಿನ ಪ್ರಕಾರ ಮಾನಸಿಕ ಕಿರುಕುಳ ಅಥವಾ ದೌರ್ಜನ್ಯ ವ್ಯಾಪ್ತಿಗೆ ಬರುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಸೊಸೆ ಆತ್ಯಮತ್ಹೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಪತಿ, ಅತ್ತೆ-ಮಾವ ಹಾಗೂ ಭಾಮೈದ ಅವರನ್ನು ನಿರಪರಾಧಿಗಳು ಎಂದು ತೀರ್ಪು ನೀಡಿದ ನ್ಯಾಯಾಲಯ ಬಿಡುಗಡೆಗೆ ಆದೇಶಿಸಿದೆ.