ದಿಮಾಪುರ: ನಾಗಾಲ್ಯಾಂಡ್‍ನ ಜಲಮಾರ್ಗ ಸಾಮರ್ಥ್ಯವನ್ನು ಸದೃಢಗೊಳಿಸುವ ಗುರಿ ಸಾಧಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಕೇಂದ್ರ ಬಂದರುಗಳು, ಶಿಪ್ಪಿಂಗ್ ಮತ್ತು ಜಲಮಾರ್ಗಗಳ ಖಾತೆ ಸಚಿವ ಸರ್ಬಾನಂದ ಸೋನೊವಾಲ್ ಪಾಲುದಾರರ ಸಮಾವೇಶದಲ್ಲಿ ಘೋಷಿಸಿದರು.
ನಾಗಾಲ್ಯಾಂಡ್‍ನ ಮುಖ್ಯಮಂತ್ರಿ ನೇಫಿಯು ರಿಯೊ ಅವರು ಸರ್ಬಾನಂದ ಸೋನೊವಾಲ್ ಅವರೊಂದಿಗೆ ಸೇರಿ ಟಿಝು ಝುಂಕಿ (ರಾಷ್ಟ್ರೀಯ ಜಲಮಾರ್ಗಗಳು 101) ಅಭಿವೃದ್ಧಿಯನ್ನು ಭಾರತದ ಒಳನಾಡು ಜಲಮಾರ್ಗಗಳ ಪ್ರಾಧಿಕಾರ ಮತ್ತು ನಾಗಾಲ್ಯಾಂಡ್ ಸರ್ಕಾರದ ಸಾರಿಗೆ ಇಲಾಖೆ ಎರಡೂ ನ್ಯಾವಿಗೇಷನ್ ಕಾರ್ಯಸಾಧ್ಯತೆಗಾಗಿ ಅಧ್ಯಯನ ಮಾಡಲು ಒಟ್ಟಾಗಿ ಕೆಲಸ ಮಾಡುವುದಾಗಿ ಘೋಷಿಸಿದರು.
ರಿಯೊ ಮತ್ತು ಸೊನೊವಾಲ್ ಸಮುದಾಯದ ಜೆಟ್ಟಿಗಳೊಂದಿಗೆ ಡೊಯಾಂಗ್ ನದಿಯ ಸರೋವರದ ಅಪಾರ ಪ್ರವಾಸೋದ್ಯಮ ಸಾಮಥ್ರ್ಯವನ್ನು ಅಭಿವೃದ್ಧಿಪಡಿಸಲು ಉಪಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಘೋಷಿಸಿದರು ಮತ್ತು ರೋ ಪ್ಯಾಕ್ಸ್ ದೋಣಿಗಳ ಅಧ್ಯಯನದ ಕಾರ್ಯಸಾಧ್ಯತೆಯನ್ನು ಸಹ ಪ್ರಕಟಿಸಿದರು. ಇದು ರಾಜ್ಯದ ಪ್ರವಾಸೋದ್ಯಮ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ ಎಂದು ಬಣ್ಣಿಸಿದರು.
ಭಾರತ ಸರ್ಕಾರದ ಬಂದರುಗಳು, ಶಿಪ್ಪಿಂಗ್ ಮತ್ತು ಜಲಮಾರ್ಗಗಳ ಸಚಿವಾಲಯದ ನೋಡಲ್ ಏಜೆನ್ಸಿಯಾದ ಭಾರತದ ಒಳನಾಡಿನ ಜಲಮಾರ್ಗಗಳ ಪ್ರಾಧಿಕಾರ ಆಯೋಜಿಸಿದ ಮಧ್ಯಸ್ಥಗಾರರ ಸಮ್ಮೇಳನದ ಸಂವಾದಾತ್ಮಕ ಅಧಿವೇಶನದಲ್ಲಿ ಈ ಬೆಳವಣಿಗೆಗಳನ್ನು ಘೋಷಿಸಲಾಗಿದೆ. ಉಪಮುಖ್ಯಮಂತ್ರಿ, ಯಾಂತುಂಗೋ ಪ್ಯಾಟನ್; ನಾಗಾಲ್ಯಾಂಡ್‍ನ ಪ್ರವಾಸೋದ್ಯಮ ಸಚಿವ ತೆಮ್ಜೆನ್ ಇಮ್ನಾ, ಸಂಸದ ಎಸ್‍ಎಸ್ ಜಮೀರ್ ಮತ್ತಿತರರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಜಲಮಾರ್ಗಗಳು ಅತ್ಯಂತ ಆರ್ಥಿಕ, ಸುಸ್ಥಿರ ಮತ್ತು ಪರಿಣಾಮಕಾರಿ ಸಾರಿಗೆ ವಿಧಾನವಾಗಿದೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಜೀ ಅವರು ಯಾವಾಗಲೂ ದೇಶದಲ್ಲಿ ದಕ್ಷ ಮತ್ತು ಪರಿಣಾಮಕಾರಿ ಸಾರಿಗೆ ವಿಧಾನವನ್ನು ಅಭಿವೃದ್ಧಿಪಡಿಸಲು ಕಾರ್ಯಸಾಧ್ಯವಾದ ಪರ್ಯಾಯವಾಗಿ ದೇಶದ ಒಳನಾಡಿನ ಜಲಮಾರ್ಗಗಳಿಗೆ ಆದ್ಯತೆ ನೀಡಿದ್ದಾರೆ. ಈಶಾನ್ಯದ ಜಲಮಾರ್ಗಗಳ ಸಂಕೀರ್ಣ ಮತ್ತು ಕ್ರಿಯಾತ್ಮಕ ಮಿಶ್ರಣವು ರಾಷ್ಟ್ರ ನಿರ್ಮಾಣದ ಆವೇಗವನ್ನು ನಿರ್ಮಿಸಲು ನಮಗೆ ಅತ್ಯುತ್ತಮ ಅವಕಾಶವನ್ನು ಒದಗಿಸುತ್ತದೆ. ನಾವು ದೃಢವಾಗಿ ಬದ್ಧರಾಗಿರುತ್ತೇವೆ ಮತ್ತು ಪ್ರದೇಶದ ಜಲಮಾರ್ಗಗಳ ಅಭಿವೃದ್ಧಿಗೆ ಪ್ರಚೋದನೆಯನ್ನು ಒದಗಿಸುವ ಹಾದಿಯಲ್ಲಿದ್ದೇವೆ ಎಂದು ಸೋನೆವಾಲ್ ಘೋಷಿಸಿದರು.