Wednesday, July 3, 2024
Google search engine
Homeತಾಜಾ ಸುದ್ದಿKalki 2898 AD: 2ನೇ ದಿನಕ್ಕೆ 298 ಕೋಟಿ ಬಾಚಿದ ಪ್ರಭಾಸ್ ಸಿನಿಮಾ!

Kalki 2898 AD: 2ನೇ ದಿನಕ್ಕೆ 298 ಕೋಟಿ ಬಾಚಿದ ಪ್ರಭಾಸ್ ಸಿನಿಮಾ!

ನಾಗ್ ಅಶ್ವಿನ್ ನಿರ್ದೇಶಿಸಿ ಪ್ರಭಾಸ್, ಅಮಿತಾಭ್‍ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ನಂತರ ಸ್ಟಾರ್ ನಟರ ದಂಡೇ ಇರುವ ಕಲ್ಕಿ 2898 ಎಡಿ ಸಿನಿಮಾ ಬಾಕ್ಸ್ ಆಫೀಸ್ ಧೂಳಿ ಮಾಡುತ್ತಿದ್ದು, ದಾಖಲೆ ಗಳಿಕೆ ಮೂಲಕ ದಾಖಲೆ ಬರೆಯುತ್ತಿದೆ.

ಮೊದಲ ದಿನ ಭಾರತದಲ್ಲೇ 95 ಕೋಟಿ ರೂ. ಗಳಿಸಿ ಸಲಾರ್, ಕೆಜಿಎಫ್-2 ಮುಂತಾದ ಸಿನಿಮಾಗಳ ದಾಖಲೆ ಮುರಿದಿದ್ದ ಕಲ್ಕಿ 2898 ಎಡಿ ಸಿನಿಮಾ ಜಾಗತಿಕ ಮಟ್ಟದಲ್ಲಿ 298 ಕೋಟಿ ರೂ. ಕಲೆ ಹಾಕಿ ಎರಡನೇ ದಿನವೂ ಭರ್ಜರಿ ಕಲೆಕ್ಷನ್ ಮಾಡಿದೆ.

ಕಲ್ಕಿ ಸಿನಿಮಾ ಮೊದಲ ದಿನ ಭಾರತದಲ್ಲಿ 95 ಕೋಟಿ ಮತ್ತು ಜಾಗತಿಕಟ್ಟ ಸೇರಿ ಒಟ್ಟಾರೆ 191.5 ಕೋಟಿ ರೂ. ಗಳಿಸಿತ್ತು. ಎರಡನೇ ದಿನ ಭಾರತದಲ್ಲಿ 54 ಸೇರಿದಂತೆ ಒಟ್ಟಾರೆ 149.30 ಕೋಟಿ ರೂ. ಕಲೆ ಹಾಕಿ ಒಟ್ಟಾರೆ ಗಳಿಕೆ 298 ಕೋಟಿಗೆ ಏರಿಕೆಯಾಗಿದ್ದು, ವೀಕೆಂಡ್ ನಲ್ಲಿಯೇ 500 ಕೋಟಿ ರೂ. ಸಂಗ್ರಹಿಸುವ ಮುನ್ಸೂಚನೆ ನೀಡಿದೆ.

ಸಿನಿಮಾದ ಬಜೆಟ್ 600 ಕೋಟಿ ರೂ. ಆಗಿದ್ದು, ತೆಲುಗು ಭಾಷೆಯೊಂದರಲ್ಲೇ 65 ಕೋಟಿ ಗಳಿಸಿ ಪ್ರಾಬಲ್ಯ ಪಡೆದಿದೆ. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸ್ಟಾರ್ ನಟರ ಅಭಿನಯ ಕೂಡ ಗಮನ ಸೆಳೆಯುತ್ತಿದೆ.

ಚಿತ್ರದಲ್ಲಿ ದಿಶಾ ಪಠಾಣಿ, ವಿಜಯ್ ದೇವರಕೊಂಡ, ಎಸ್.ಎಸ್. ರಾಜಮೌಳಿ ಸೇರಿದಂತೆ ಹಲವು ಸ್ಟಾರ್ ನಟರು ಕೂಡ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರಕ್ಕೆ ಸೂಪರ್ ಸ್ಟಾರ್ ನಟರಾದ ರಜನಿಕಾಂತ್, ನಾಗಾರ್ಜುನ ಸೇರಿದಂತೆ ಹಲವು ದಿಗ್ಗಜರು ಕೂಡ ಸಿನಿಮಾಗೆ ಅಭಿನಂದನೆ ಸಲ್ಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರದ ಎರಡನೇ ಭಾಗದ ಕುತೂಹಲ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments