Saturday, June 29, 2024
Google search engine
Homeತಾಜಾ ಸುದ್ದಿರೈತರನ್ನು ಕಡೆಗಣಿಸಿ ಬಿಜೆಪಿ 71 ಸ್ಥಾನ ಕಳೆದುಕೊಂಡಿತು: ಕಿಸಾನ್ ಮೋರ್ಚಾ ನಾಯಕ ಜಗಜೀತ್ ಸಿಂಗ್

ರೈತರನ್ನು ಕಡೆಗಣಿಸಿ ಬಿಜೆಪಿ 71 ಸ್ಥಾನ ಕಳೆದುಕೊಂಡಿತು: ಕಿಸಾನ್ ಮೋರ್ಚಾ ನಾಯಕ ಜಗಜೀತ್ ಸಿಂಗ್

ರೈತ ಸಮುದಾಯದ ಆಕ್ರೋಶದಿಂದ ಗ್ರಾಮೀಣ ಪ್ರದೇಶದಲ್ಲಿ 2019ರ ಚುನಾವಣೆಗೆ ಹೋಲಿಸಿದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 71 ಸ್ಥಾನಗಳನ್ನು ಕಳೆದುಕೊಂಡಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯತರ) ಸಂಘಟನೆಯ ರಾಷ್ಟ್ರೀಯ ರೈತ ಮುಖಂಡ ಜಗಜಿತ್ ಸಿಂಗ್ ದಲೈವಾಲ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 12 ಬೇಡಿಕೆಗಳನ್ನು ಮುಂದಿರಿಸಿ ಪಂಜಾಬ್ ಮತ್ತು ಹರಿಯಾಣ ರೈತರು ನಡೆಸುತ್ತಿರುವ ಪ್ರತಿಭಟನೆಗೆ ದೇಶದ್ಯಂತ ರೈತರ ಬೆಂಬಲ ಇದೆ. ದಕ್ಷಿಣ ಭಾರತ ರಾಜ್ಯಗಳ ರೈತರು ಬೆಂಬಲಿಸಿ ಚಳುವಳಿಯನ್ನು ಪ್ರಬಲಗೊಳಿಸಿ, ರೈತಶಕ್ತಿಯನ್ನು ಹೆಚ್ಚಿಸಬೇಕು. ಎಸ್‌ಕೆಎಂ (ರಾಜಕೀಯೇತರ) ಸೆಪ್ಟೆಂಬರ್‌ನಲ್ಲಿ ಹರಿಯಾಣದಲ್ಲಿ ರೈತ ರ್ಯಾಲಿಯನ್ನು ಆಯೋಜಿಸುತ್ತಿದ್ದು, ಇದರಲ್ಲಿ ಎಲ್ಲಾ ರಾಜ್ಯಗಳಿಂದ 1 ಲಕ್ಷಕ್ಕೂ ಹೆಚ್ಚು ರೈತರ ಭಾಗವಹಿಸಲಿದ್ದಾರೆ ಎಂದು ಕರೆ ನೀಡಿದರು.

ಎಂಎಸ್‌ಪಿ ಖಾತರಿ ಕಾನೂನಿಗೆ ಆಗ್ರಹಿಸಿ ಫೆಬ್ರವರಿ 13 ರಿಂದ 4 ಸ್ಥಳಗಳಲ್ಲಿ ನಮ್ಮ ಪ್ರತಿಭಟನೆ ನಡೆಯುತ್ತಿದ್ದು, 125 ದಿನಗಳಿಗೂ ಹೆಚ್ಚು ಕಾಲ ಸಾವಿರಾರು ರೈತರು ರಸ್ತೆಗಿಳಿದಿದ್ದಾರೆ, ಕೇಂದ್ರ ಸರ್ಕಾರ ಈಡೇರಿಸುವವರೆಗೆ ಈ ಪ್ರತಿಭಟನೆ ಮುಂದುವರಿಯುತ್ತದೆ ಎಂದು ಹೇಳಿದರು

ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ತಮ್ಮ ರೈತ ವಿರೋಧಿ ನೀತಿಯನ್ನು ಬದಲಾಯಿಸದಿದ್ದರೆ ಬಿಜೆಪಿ ರೈತರ ಬಾರಿ ಆಕ್ರೋಶ ಎದುರಿಸಲಿದೆ.  ಮುಂಬರುವ ಎಲ್ಲಾ ವಿಧಾನಸಭಾ ಚುನಾವಣೆಗಳಲ್ಲಿ ಆಯಾ ರಾಜ್ಯಗಳಲ್ಲಿ ರೈತರ ಶಕ್ತಿ  ತೋರಿಸಲಾಗುವುದು ಎಂದು ಅವರು ಎಚ್ಚರಿಸಿದರು.

ಜುಲೈ 8ರಂದು ಎಸ್‌ಕೆಎಂ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ವತಿಯಿಂದ ಬಿಜೆಪಿಯ 240 ಸಂಸದರನ್ನು ಹೊರತುಪಡಿಸಿ ಎಲ್ಲಾ ಸಂಸತ್ ಸದಸ್ಯರಿಗೆ ತಮ್ಮ 12 ಬೇಡಿಕೆಗಳ ಕುರಿತು ಜ್ಞಾಪಕ ಪತ್ರವನ್ನು ನೀಡಲಿದೆ ಎಂದು ಜಗಜೀತ್ ಸಿಂಗ್ ನುಡಿದರು.

ಜುಲೈ ತಿಂಗಳಲ್ಲಿ ಎರಡು ವೇದಿಕೆಗಳಲ್ಲಿ ದೆಹಲಿಯಲ್ಲಿ ಬೃಹತ್ ರೈತ ಸಮಾವೇಶವನ್ನು ಆಯೋಜಿಸಲಿವೆ. ಪ್ರಸ್ತುತ  ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಬಲಪಡಿಸಲು ದಕ್ಷಿಣ ಭಾರತದ ರೈತರು ಜೂನ್ 24 ರಂದು ಶಿವಮೊಗ್ಗದಲ್ಲಿ ಬೃಹತ್ ರೈತ ಸಮಾವೇಶವನ್ನು ಆಯೋಜಿಸಿದ್ದರು ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments