Saturday, October 5, 2024
Google search engine
Homeಕ್ರೀಡೆಆಟೋದಲ್ಲಿ ಪ್ರಯಾಣಿಸಿದ ಪ್ಯಾಟ್ ಕಮಿನ್ಸ್ ಗೆ 20 ಕೋಟಿ ಕೇಳಿದ ಕೆಕೆಆರ್ ನಾಯಕ ಅಯ್ಯರ್!

ಆಟೋದಲ್ಲಿ ಪ್ರಯಾಣಿಸಿದ ಪ್ಯಾಟ್ ಕಮಿನ್ಸ್ ಗೆ 20 ಕೋಟಿ ಕೇಳಿದ ಕೆಕೆಆರ್ ನಾಯಕ ಅಯ್ಯರ್!

17ನೇ ಆವೃತ್ತಿಯ ಐಪಿಎಲ್ ಫೈನಲ್ ಟೂರ್ನಿಗೆ ಕ್ಷಣಗಣನೆ ನಡೆದಿರುವ ಮಧ್ಯೆಯೇ ಫೈನಲಿಸ್ಟ್ ಗಳಾದ ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಆಟೋ ಸವಾರಿ ಮಾಡಿ ಸುದ್ದಿ ಮಾಡಿದ್ದಾರೆ.

ಚೆನ್ನೈನಲ್ಲಿ ಭಾನುವಾರ ಸಂಜೆ ಐಪಿಎಲ್ ಫೈನಲ್ ನಡೆಯಲಿದ್ದು, ಶನಿವಾರ ಎರಡೂ ತಂಡಗಳ ನಾಯಕರು ಆಟೋದಲ್ಲಿ ಪ್ರಯಾಣಿಸಿದ್ದಾರೆ. ವಿಶೇಷ ಅಂದರೆ ಶ್ರೇಯಸ್ ಅಯ್ಯರ್ ಆಟೋ ಚಲಾಯಿಸಿದರೆ, ಪ್ಯಾಟ್ ಕಮಿನ್ಸ್ ಹಿಂಬದಿ ಸೀಟಿನಲ್ಲಿ ಪ್ರಯಾಣ ಮಾಡಿದ್ದಾರೆ.

ಆಟೋದಲ್ಲಿ ಪ್ಯಾಟ್ ಕಮಿನ್ಸ್ ಅವರನ್ನು ಸುತ್ತಾಡಿಸಿದ ನಂತರ ಶ್ರೇಯಸ್ ಅಯ್ಯರ್ ಶುಲ್ಕ ಕೇಳಿದ್ದಾರೆ. ಆಗ ಕಮಿನ್ಸ್ ಎಷ್ಟು ಕೊಡಬೇಕು ಎಂದು ಪ್ರಶ್ನಿಸಿದಾಗ, ಅಯ್ಯರ್ 20 ಕೋಟಿ ರೂ. ಎಂದು ಹೇಳಿದ್ದು ಈಗ ವೈರಲ್ ಆಗಿದೆ.

ಐಪಿಎಲ್ ನಲ್ಲಿ ಈ ಬಾರಿ ವಿಜೇತ ತಂಡಕ್ಕೆ 20 ಕೋಟಿ ರೂ. ಬಹುಮಾನ ರೂಪದಲ್ಲಿ ದೊರೆಯಲಿದೆ. ಅಯ್ಯರ್ ಮಾರ್ಮಿಕವಾಗಿ ಕಪ್ ಬಿಟ್ಟುಕೊಡಿ ಎಂಬರ್ಥದಲ್ಲಿ ಕೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments