ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಪತ್ನಿ ಅಥಿಯಾ ಶೆಟ್ಟಿ ಮುಂಬೈನ ಬಾಂದ್ರಾದಲ್ಲಿ 20 ಕೋಟಿ ರೂ. ಮೌಲ್ಯದ ಅಪಾರ್ಟ್ ಮೆಂಟ್ ಖರೀದಿಸಿದ್ದಾರೆ.
ಪಾಲಿ ಹಿಲ್ ಜಿಲ್ಲೆಯಲ್ಲಿ 3350 ಚದರ ಅಡಿ ವಿಸ್ತೀರ್ಣದ ಅಪಾರ್ಟ್ ಮೆಂಟ್ ಖರೀದಿಸಿದ್ದು, ಇದರ ಮೌಲ್ಯ 20 ಕೋಟಿ ರೂ. ಎಂದು ಹೇಳಲಾಗಿದೆ.
ಪ್ರಸ್ತುತ ಸಂಧು ಪ್ಯಾಲೇಸ್ ಅಪಾರ್ಟ್ ಮೆಂಟ್ ನಲ್ಲಿ ರಾಹುಲ್-ಆತಿಯಾ ವಾಸವಾಗಿದ್ದರು. ಇದೀಗ ಹೊಸ ಅಪಾರ್ಟ್ ಮೆಂಟ್ ಖರೀದಿಸಲು 1.20 ಕೋಟಿ ಸ್ಟಾಂಪ್ ಡ್ಯೂಟಿ ಮತ್ತು 30 ಸಾವಿರ ರೂ. ನೋಂದಣಿ ಶುಲ್ಕ ಪಾವತಿಸಬೇಕಾಗಿದೆ. ಜುಲೈ 15ರಂದು ಹೊಸ ಅಪಾರ್ಟ್ ಮೆಂಟ್ ಖರೀದಿ ಮಾಡಲಾಗಿದೆ.