Monday, September 16, 2024
Google search engine
Homeತಾಜಾ ಸುದ್ದಿಲಂಗೋಟಿ ಸನಾತನ ಸಂಸ್ಕೃತಿ ಪ್ರತೀಕ: `ಲಂಗೋಟಿ ಮ್ಯಾನ್’ ಚಿತ್ರ ಬ್ಯಾನ್ ಗೆ ಅರ್ಚಕರ ಆಗ್ರಹ

ಲಂಗೋಟಿ ಸನಾತನ ಸಂಸ್ಕೃತಿ ಪ್ರತೀಕ: `ಲಂಗೋಟಿ ಮ್ಯಾನ್’ ಚಿತ್ರ ಬ್ಯಾನ್ ಗೆ ಅರ್ಚಕರ ಆಗ್ರಹ

ಲಂಗೋಟಿ ಮ್ಯಾನ್ ಚಿತ್ರಕ್ಕೆ ಅಖಿಲ ಕರ್ನಾಟಕ ಅರ್ಚಕರ ಹಾಗೂ ಪುರೋಹಿತರ ಪರಿಷತ್ ತೀವ್ರ ಖಂಡನೆ ವ್ಯಕ್ತಪಡಿಸಿದ್ದು, ಈ ಚಿತ್ರ ಬ್ಯಾನ್ ಮಾಡದಿದ್ದರೆ ಎಲ್ಲಾ ಚಿತ್ರಮಂದಿರಗಳ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದೆ.

`ಲಂಗೋಟಿ ಮ್ಯಾನ್’ ಚಿತ್ರದ ಟೈಟಲ್‌ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ ಕಾರ್ಯಾಧ್ಯಕ್ಷ, ರಾಘವೇಂದ್ರ ಭಟ್, ಅವರು ಈ ರೀತಿ ಒಂದು ಸಮುದಾಯದ ಕುರಿತು ಅಪಹಾಸ್ಯ ಮಾಡುವುದು ತಪ್ಪು ಎಂದರು.

ಲಂಗೋಟಿ ಮ್ಯಾಚ್ ಚಿತ್ರವನ್ನು ಬ್ಯಾನ್ ಮಾಡದಿದ್ದರೆ ಎಲ್ಲ ಚಿತ್ರಮಂದಿರಗಳಲ್ಲಿ ಪ್ರತಿಭಟನೆ ನಡೆಸುತ್ತೇವೆ. ಲಂಗೋಟಿ, ಜನಿವಾರ ಇವು ಸನಾತನ ಸಂಸ್ಕ್ರತಿಯ ಪ್ರತೀಕ. ಇದು ಅಪಹಾಸ್ಯ ಮಾಡುವ ವಿಚಾರವಲ್ಲ. ಇತ್ತೀಚೆಗೆ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಎಲ್ಲರ ಶ್ರೇಯೋಭಿವೃದ್ದಿಗೆ ಪೂಜೆ ಮಾಡಿದ್ದಾರೆ. ಇಂದು ನಮ್ಮನ್ನೇ ಅಪಹಾಸ್ಯ ಮಾಡುತ್ತಿದ್ದಾರೆ. ಇದನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದರು.

ಚಿತ್ರ ತಂಡದವರಿಗೆ ಈ ಮೂಲಕ ಎಚ್ಚರಿಕೆ ಕೊಡುತ್ತಿದ್ದೇವೆ. ಒಂದೊಮ್ಮೆ ಇದನ್ನು ಬಿಡುಗಡೆ ಮಾಡಿದರೆ ರಾಜ್ಯಾದ್ಯಂತ ಪ್ರತಿಭಟನೆಗೆ ಅರ್ಚಕರ ಪರಿಷತ್ತ್ ನಿರ್ಧರಿಸಿದೆ ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ ಅಧ್ಯಕ್ಷ ವಿಶ್ವೇಶ್ವರ ಭಟ್,  ಪ್ರಧಾನ ಕಾರ್ಯದರ್ಶಿ ವೇದಮೂರ್ತಿ ಭಾನುಪ್ರಕಾಶ್ ಶರ್ಮ ಮುಂತಾದವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments