Saturday, September 7, 2024
Google search engine
Homeತಾಜಾ ಸುದ್ದಿ`ಮ್ಯಾಕ್ಸ್’ ಟೀಸರ್ ರಿಲೀಸ್: ಬಾ ಬಾ ಬ್ಲಾಕ್ ಶೀಪ್ ಗೆ ಕಿಚ್ಚ ಸುದೀಪ್ ಟ್ವಿಸ್ಟ್!

`ಮ್ಯಾಕ್ಸ್’ ಟೀಸರ್ ರಿಲೀಸ್: ಬಾ ಬಾ ಬ್ಲಾಕ್ ಶೀಪ್ ಗೆ ಕಿಚ್ಚ ಸುದೀಪ್ ಟ್ವಿಸ್ಟ್!

ಕಿಚ್ಚ ಸುದೀಪ್ ಅಭಿನಯದ `ಮ್ಯಾಕ್ಸ್’ ಚಿತ್ರದ ಟೀಸರ್ ಬಿಡುಗಡೆ ಆಗಿದ್ದು, ಹಲವು ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರ ಬಿಡುಗಡೆಗೆ ಸಜ್ಜಾಗಿದೆ.

ಜುಲೈ 16ರಂದು ಮಧ್ಯಾಹ್ನ ಮ್ಯಾಕ್ಸ್ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ವಿಕ್ರಾಂತ್ ರೋಣ, ಕೋಟಿಗೊಬ್ಬ-3 ನಂತರ ಸುದೀಪ್ ಅಭಿನಯದ ಚಿತ್ರ ಬಿಡುಗಡೆ ಆಗುತ್ತಿದೆ. ಆಕ್ಷನ್-ಥ್ರಿಲ್ಲರ್ ಕಥಾ ಹಂದರ ಹೊಂದಿರುವ `ಮ್ಯಾಕ್ಸ್’ ಟೀಸರ್ ನಿಂದ ಕುತೂಹಲ ಹೆಚ್ಚಾಗಿದೆ.

ವಿಜಯ್ ಕಾರ್ತಿಕೇಯ ಈ ಚಿತ್ರವನ್ನು ನಿರ್ದೇಶಿಸಿದ್ದು, ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಟೀಸರ್ ನಲ್ಲಿ ನರ್ಸರಿಯಲ್ಲಿ ಮಕ್ಕಳಿಗೆ ಹೇಳಿಕೊಡುವ ಬಾ ಬಾ ಬ್ಲಾಕ್ ಶೀಪ್.. ಹಾಡನ್ನು ಸುದೀಪ್ ಹಾಡಿದ್ದು, ಈ ಹಾಡಿಗೆ ಟ್ವಿಸ್ಟ್ ನೀಡಿದ್ದಾರೆ.

ಹಾಡಿನಲ್ಲಿ ಪಾತ್ರಗಳನ್ನು ಪರಿಚಯಿಸುತ್ತಾ ಹೋಗುವ ಸುದೀಪ್ ಕೊನೆಯ ದೃಶ್ಯದಲ್ಲಿ ಡ್ಯಾನ್ಸ್ ಗೆ ಹೆಜ್ಜೆ ಹಾಕಿದ್ದಾರೆ. ಚಿತ್ರದ ಬಿಡುಗಡೆಗೆ ಅಧಿಕೃತವಾಗಿ ದಿನಾಂಕ ಘೋಷಣೆ ಮಾಡದೇ ಇದ್ದರೂ ಅತ್ಯಂತ ಶೀಘ್ರದಲ್ಲಿ ಚಿತ್ರ ಬಿಡುಗಡೆ ಆಗಲಿದೆ ಎಂದು ಸುಳಿವು ನೀಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments