Sunday, October 20, 2024
Google search engine
Homeತಾಜಾ ಸುದ್ದಿಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ: ವೈದ್ಯ ಮತ್ತು 5 ವಲಸೆ ಕಾರ್ಮಿಕರ ಹತ್ಯೆ

ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ: ವೈದ್ಯ ಮತ್ತು 5 ವಲಸೆ ಕಾರ್ಮಿಕರ ಹತ್ಯೆ

ಸ್ಥಳೀಯ ವೈದ್ಯ ಹಾಗೂ 5 ವಲಸಿಗ ಕಾರ್ಮಿಕರನ್ನು ಉಗ್ರರು ಹತ್ಯೆಗೈದ ಘಟನೆ ಜಮ್ಮು ಕಾಶ್ಮೀರದ ಗಂಡ್ರೇಬೆಲ್ ಜಿಲ್ಲೆಯ ಸೋನಾಬರ್ಗ್ ನಲ್ಲಿ ನಡೆದಿದೆ.

ಭಾನುವಾರ ಸಂಜೆ ನಿರ್ಮಾಣ ಹಂತದ ಸುರಂಗದ ಮೇಲೆ ದಾಳಿ ಮಾಡಿದ ಉಗ್ರರು 6 ಮಂದಿಯನ್ನು ಹತ್ಯೆಗೈದಿದ್ದಾರೆ. ಭಾರತೀಯ ಸೇನೆ ಘಟನೆ ನಡೆದ ಪ್ರದೇಶವನ್ನು ಸುತ್ತುವರಿದಿದ್ದು, ಉಗ್ರರ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದಾರೆ.

ಜೆಡ್-ಮಾರ್ಥ್ ಸುರಂಗದ ಕಾಮಗಾರಿ ನಡೆಯುತ್ತಿದ್ದ ವೇಳೆ ಉಗ್ರರು ದಾಳಿ ನಡೆಸಿದ್ದಾರೆ. ಘಟನೆಗೆ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಆಘಾತ ವ್ಯಕ್ತಪಡಿಸಿದ್ದು, ನಾಗರಿಕರ ಮೇಲೆ ಈ ರೀತಿ ದಾಳಿ ಮಾಡುವುದು ಅಮಾನವೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments