Saturday, July 6, 2024
Google search engine
Homeತಾಜಾ ಸುದ್ದಿಮಿನಿ ವಿಮಾನ ಪತನ: 2 ಮಕ್ಕಳು ಸೇರಿ ಒಂದೇ ಕುಟುಂಬದ 5 ಮಂದಿ ಸಾವು

ಮಿನಿ ವಿಮಾನ ಪತನ: 2 ಮಕ್ಕಳು ಸೇರಿ ಒಂದೇ ಕುಟುಂಬದ 5 ಮಂದಿ ಸಾವು

ಮಿನಿ ವಿಮಾನವೊಂದು ಪತನಗೊಂಡಿದ್ದರಿಂದ 2 ಮಕ್ಕಳು ಸೇರಿದಂತೆ 5 ಮಂದಿ ಮೃತಪಟ್ಟ ಘಟನೆ ಅಮೆರಿಕದ ನ್ಯೂಯಾರ್ಕ್ ನಲ್ಲಿ ಸಂಭವಿಸಿದೆ.

ಓನೆಂಟಾದ ಅಲ್ಫ್ರೆಡ್ ಎಸ್ ನಾಡೆರ್ ವಲಯದ ವಿಮಾನ ನಿಲ್ದಾಣದಲ್ಲಿ ಮಿನಿ ವಿಮಾನ ಟೇಕಾಫ್ ಆಗುತ್ತಿದ್ದಂತೆ ಪತನಗೊಂಡಿದೆ.

ಏಕ ಇಂಜಿನ್ ನ ಪಿಪರ್ ಪಿಎ-46 ವಿಮಾನದಲ್ಲಿ ಎರಡು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 5 ಮಂದಿ ಪ್ರಯಾಣಿಸುತ್ತಿದ್ದು, ವಿಮಾನ ಪತನಗೊಂಡಿದ್ದರಿಂದ ವಿಮಾನದಲ್ಲಿದ್ದ ಎಲ್ಲರೂ ಅಸುನೀಗಿದ್ದಾರೆ. ವಿಮಾನ ಪತನಕ್ಕೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments