Monday, September 16, 2024
Google search engine
Homeತಾಜಾ ಸುದ್ದಿನಾಳೆ ಬಾಂಗ್ಲಾದೇಶ ಮಧ್ಯಂತರ ಸರ್ಕಾರ ರಚನೆ: ಪ್ರಧಾನಿಯಾಗಿ ಮುಹಮ್ಮದ್ ಯೂನುಸ್ ಪ್ರಮಾಣ ವಚನ ಸ್ವೀಕಾರ!

ನಾಳೆ ಬಾಂಗ್ಲಾದೇಶ ಮಧ್ಯಂತರ ಸರ್ಕಾರ ರಚನೆ: ಪ್ರಧಾನಿಯಾಗಿ ಮುಹಮ್ಮದ್ ಯೂನುಸ್ ಪ್ರಮಾಣ ವಚನ ಸ್ವೀಕಾರ!

ನೋಬೆಲ್ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಯೂನುಸ್ ನೇತೃತ್ವದಲ್ಲಿ ಗುರುವಾರ ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ.

ಪ್ರಧಾನಿ ಸ್ಥಾನಕ್ಕೆ ಶೇಖ್ ಹಸೀನಾ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿದ ಬೆನ್ನಲ್ಲೇ ಬಾಂಗ್ಲಾದೇಶ ಸೇನೆಯ ಬೆಂಬಲ ಪಡೆದಿರುವ ಮುಹಮ್ಮದ್ ಯೂನುಸ್ ಗುರುವಾರ ಮಧ್ಯಂತರ ಸರ್ಕಾರದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಬಡವರ ಬ್ಯಾಂಕರ್ ಎಂದೇ ಖ್ಯಾತರಾಗಿರುವ ಮುಹಮ್ಮದ್ ಪ್ರತಿಭಟನಾಕಾರರು ಹಾಗೂ ಬಾಂಗ್ಲಾದೇಶ ಸೇನೆಯ ಬೆಂಬಲದೊಂದಿಗೆ ಮಧ್ಯಂತರ ಸರ್ಕಾರ ರಚಿಸಲಿದ್ದಾರೆ.

ಇದೇ ವೇಳೆ ಮುಹಮದ್ ಯೂನುಸ್ ಸೂಚನೆ ಮೇರೆಗೆ ಕಳೆದೆರಡು ವರ್ಷಗಳಿಂದ ಗೃಹ ಬಂಧನದಲ್ಲಿದ್ದ ಖಾಲಿದಾ ಜಿಯಾ ಅವರನ್ನು ಬಿಡುಗಡೆ ಮಾಡಲಾಗಿದೆ. ಆದರೆ ಅವರು ಸರ್ಕಾರದಲ್ಲಿ ಭಾಗಿಯಾಗುವ ಬಗ್ಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments