Saturday, November 23, 2024
Google search engine
HomeಕಾನೂನುBREAKING ನಿರ್ಮಲಾ ಸೀತರಾಮನ್ ಸೇರಿ ಬಿಜೆಪಿಗೆ ಬಿಗ್ ರಿಲೀಫ್: ಚುನಾವಣಾ ಬಾಂಡ್ ಅಕ್ರಮ ಎಫ್ ಐಆರ್...

BREAKING ನಿರ್ಮಲಾ ಸೀತರಾಮನ್ ಸೇರಿ ಬಿಜೆಪಿಗೆ ಬಿಗ್ ರಿಲೀಫ್: ಚುನಾವಣಾ ಬಾಂಡ್ ಅಕ್ರಮ ಎಫ್ ಐಆರ್ ಗೆ ತಡೆಯಾಜ್ಞೆ

ಚುನಾವಣಾ ಬಾಂಡ್ ಸುಲಿಗೆ ಅಕ್ರಮ ಪ್ರಕರಣದ ಎಫ್ ಐಆರ್ ಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಈ ಮೂಲಕ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಸೇರಿದಂತೆ ಬಿಜೆಪಿ ಮುಖಂಡರಿಗೆ ಬಿಗ್ ರಿಲೀಫ್ ಸಿಕ್ಕಿದಂತಾಗಿದೆ.

ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿರುವ ಮಾಜಿ ಸಂಸದ ನಳೀನ್ ಕುಮಾರ್ ಪ್ರಕರಣ ರದ್ದುಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ನೇತೃತ್ವದ ಹೈಕೋರ್ಟ್ ಏಕಸದಸ್ಯ ಪೀಠ ತಡೆಯಾಜ್ಞೆ ನೀಡಿದೆ.

ಬೆಂಗಳೂರಿನಲ್ಲಿರುವ ಕಂಪನಿಗಳಿಗೆ ಬೆದರಿಕೆ ಹಾಕಿ ಚುನಾವಣಾ ಬಾಂಡ್ ಮೂಲಕ ಸುಲಿಗೆ ಮಾಡಲಾಗಿದೆ ಎಂದು ಜನಾದೇಶ ಪರಿಷತ್ ನೀಡಿದ ದೂರಿನ ಆಧಾರದಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯದ ಸೂಚನೆಗೆ ಮೇರೆಗೆ ಬೆಂಗಳೂರಿನ ತಿಲಕನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿತ್ತು

ಪ್ರಕರಣದಲ್ಲಿ ನಿರ್ಮಲಾ ಸೀತಾರಾಮನ್, ಇಡಿ ಅಧಿಕಾರಿಗಳು, ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ 6 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments