Sunday, September 8, 2024
Google search engine
Homeತಾಜಾ ಸುದ್ದಿಇಂಡಿಯನ್-2 ಚಿತ್ರದಲ್ಲಿ 12 ನಿಮಿಷ ಕಡಿತ: ಅಧಿಕೃತ ಘೋಷಣೆ

ಇಂಡಿಯನ್-2 ಚಿತ್ರದಲ್ಲಿ 12 ನಿಮಿಷ ಕಡಿತ: ಅಧಿಕೃತ ಘೋಷಣೆ

ಕಮಲ್ ಹಾಸನ್ ನಟಿಸಿ ಶಂಕರ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಇಂಡಿಯನ್-2 ದೀರ್ಘವಾಯಿತು ಎಂಬ ಟೀಕೆಗಳ ಹಿನ್ನೆಲೆಯಲ್ಲಿ 12 ನಿಮಿಷಗಳ ದೃಶ್ಯಗಳಿಗೆ ಕಡಿತ ಮಾಡಲಾಗಿದೆ.

ಸಿನಿಮಾದ 12 ನಿಮಿಷಗಳ ಕಾಲದ ದೃಶ್ಯಗಳನ್ನು ಕಡಿತ ಮಾಡಲಾಗಿದೆ ಎಂದು ಇಂಡಿಯನ್-2 ಚಿತ್ರ ತಂಡ ಅಧಿಕೃತವಾಗಿ ಘೋಷಿಸಿದೆ. ಇದಕ್ಕೂ ಮುನ್ನ ಸಿನಿಮಾವನ್ನು 20 ನಿಮಿಷಗಳ ಕಾಲ ಕಡಿತ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು.

ಲೈಸಾ ಪ್ರೊಡಾಕ್ಷನ್ ಸಂಸ್ಥೆ ನಿಮ್ಮ ಧ್ವನಿ ನಮಗೆ ಕೇಳಿಸಿದೆ. ನಿಮ್ಮ ಸಲಹೆಯಂತೆ 12 ನಿಮಿಷಗಳಿಗೆ ಕತ್ತರಿ ಹಾಕಲಾಗಿದೆ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ. ಇದರಿಂದ 3 ಗಂಟೆ 4 ನಿಮಿಷಗಳ ಚಿತ್ರ ಇದೀಗ 2 ಗಂಟೆ 52 ನಿಮಿಷಗಳದ್ದಾಗಿದೆ.

ಇಂಡಿಯನ್-2 ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚಿತ್ರ ತುಂಬಾ ದೀರ್ಘವಾಯಿತು ಎಂದು ಟೀಕೆ ವ್ಯಕ್ತವಾಗಿತ್ತು. ಮಿಶ್ರ ಪ್ರತಿಕ್ರಿಯೆ ನಡುವೆಯೂ ಇಂಡಿಯನ್-2 100 ಕೋಟಿ ಕ್ಲಬ್ ಸೇರಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments