Friday, September 20, 2024
Google search engine
Homeಜಿಲ್ಲಾ ಸುದ್ದಿಪಾಪ ಪ್ರಜ್ವಲ್ ಒಳ್ಳೆಯ ಹುಡುಗ: ಸರ್ಟಿಫಿಕೇಟ್ ನೀಡಿದ ಎಚ್.ಡಿ. ರೇವಣ್ಣ

ಪಾಪ ಪ್ರಜ್ವಲ್ ಒಳ್ಳೆಯ ಹುಡುಗ: ಸರ್ಟಿಫಿಕೇಟ್ ನೀಡಿದ ಎಚ್.ಡಿ. ರೇವಣ್ಣ

ಪಾಪ ಪ್ರಜ್ವಲ್ ರೇವಣ್ಣ ಒಳ್ಳೆಯ ಹುಡುಗ, ಅವನಿಗೆ ಏನೂ ಗೊತ್ತಾಗಲ್ಲ ಎಂದು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲುಪಾಲಾಗಿರುವ ಮಗನನ್ನು ಮಾಜಿ ಸಚಿವ ಎಚ್.ಡಿ. ರೇವಣ್ಣ ಸಮರ್ಥಿಸಿಕೊಂಡಿದ್ದಾರೆ.

ಹಾಸನದ ಆಲೂರಿನಲ್ಲಿ ಶುಕ್ರವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ಅವರನ್ನು ರಾಜಕೀಯವಾಗಿ ಮುಗಿಸಲು ಈ ಕುತಂತ್ರ ಮಾಡಲಾಗಿದೆ. ಬಡ್ಡಿ ಸಮೇತ ತೀರಿಸದಿದ್ದರೆ ನಾನು ದೇವೇಗೌಡರ ಮಗ ಅಲ್ಲ ಎಂದು ಸವಾಲು ಹಾಕಿದ್ದಾರೆ.

ಅವರು ನನ್ನ ಕೈಗೆ ಸಿಕ್ಕದೇ ಎಲ್ಲಿ ಹೋಗುತ್ತಾರೆ. ದೇವೇಗೌಡರು, ಕುಮಾರಣ್ಣ, ರೇವಣ್ಣ ನಿಮ್ಮಂತಹ ಪುಣ್ಯಾತ್ಮರಿಂದ ಉಳಿದಿದ್ದಾರೆ ಎಂದು ಅವರು ಹೇಳಿದರು.

ಹಾಸನದಲ್ಲಿ 2023ರ ಚುನಾವಣೆಯಲ್ಲಿ ಹಾಸನದಲ್ಲಿ 50 ಸಾವಿರ ಓಟಿಗೆ ಒಂದು ಓಟು ಕಡಿಮೆಯಾದರೆ ರಾಜೀನಾಮೆ ಕೊಡುತ್ತೇನೆ ಅಂಥ ಸವಾಲು ಹಾಕಿದ್ದರು. ಹೀಗಾಗಿ ನಾನೇ ಹಾಸನ ಕ್ಷೇತ್ರದಿಂದ ನಿಲ್ಲಬೇಕು ಎಂದು ಒತ್ತಾಯ ಬಂತು. ಕೊನೆಗೆ ಸ್ವರೂಪ್ ರೇವಣ್ಣ ಅವರನ್ನು ಕಣಕ್ಕೆ ಇಳಿಸಲಾಯಿತು. ಈ ಹಿನ್ನೆಲೆಯಲ್ಲಿ ಹಾಸನ ಕ್ಷೇತ್ರದ ಗೆಲುವಿನ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿದ್ದರಿಂದ ಸಕಲೇಶಪುರದಲ್ಲಿ ಸೋಲಬೇಕಾಯಿತು ಎಂದು ಅವರು ಪ್ರಜ್ವಲ್ ರೇವಣ್ಣ ಮತ್ತು ಸೂರಜ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಕುರಿತು ಪರೋಕ್ಷವಾಗಿ ವಿವರಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments