Friday, July 5, 2024
Google search engine
Homeತಾಜಾ ಸುದ್ದಿಪ್ರೀತಿಗೆ ಪೋಷಕರ ವಿರೋಧ: ಬೆಂಗಳೂರಿನಲ್ಲಿ ಕೆರೆಗೆ ಹಾರಿ ಯುವ ಪ್ರೇಮಿಗಳ ಆತ್ಮಹತ್ಯೆ

ಪ್ರೀತಿಗೆ ಪೋಷಕರ ವಿರೋಧ: ಬೆಂಗಳೂರಿನಲ್ಲಿ ಕೆರೆಗೆ ಹಾರಿ ಯುವ ಪ್ರೇಮಿಗಳ ಆತ್ಮಹತ್ಯೆ

ಯುವ ಪ್ರೇಮಿಗಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬೆಂಗಳೂರಿನ ನೈಸ್ ರಸ್ತೆ ಸಮೀಪದಲ್ಲಿ ನಡೆದಿದೆ.

ಕಾಲೇಜು ವಿದ್ಯಾರ್ಥಿನಿ ಅಂಜನಾ (20) ಮತ್ತು ಶ್ರೀಕಾಂತ್ (25) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು

ಕಳೆದ ಕೆಲ ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳು ಜುಲೈ 1ರಿಂದ ನಾಪತ್ತೆಯಾಗಿದ್ದರು. ಯುವಜೋಡಿಯ ಪ್ರೀತಿಗೆ ವಿದ್ಯಾರ್ಥಿನಿ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ತಲಘಟ್ಟಪುರ ಸಮೀಪದ ಅಂಜನಾಪುರ ವಾಸವಿದ್ದ ವಿದ್ಯಾರ್ಥಿನಿ ಅಂಜನಾ ಹಾಗೂ ಕೋಣನಕುಂಟೆ ನಿವಾಸಿ ಶ್ರೀಕಾಂತ್ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments