Thursday, September 19, 2024
Google search engine
Homeತಾಜಾ ಸುದ್ದಿವಾರಣಾಸಿಯಲ್ಲಿ ಪ್ರಧಾನಿ ಮೋದಿಗೆ 1.52 ಲಕ್ಷ ಮತಗಳಿಂದ ಗೆಲುವು!

ವಾರಣಾಸಿಯಲ್ಲಿ ಪ್ರಧಾನಿ ಮೋದಿಗೆ 1.52 ಲಕ್ಷ ಮತಗಳಿಂದ ಗೆಲುವು!

ಪ್ರಧಾನಿ ನರೇಂದ್ರ ಮೋದಿ ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಪ್ರಯಾಸದ ಗೆಲುವು ಕಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ 1.52 ಲಕ್ಷ ಮತಗಳಿಂದ ಗೆಲುವು ಸಾಧಿಸುವ ಮೂಲಕ ವಾರಣಾಸಿಯಿಂದ ಮೂರನೇ ಬಾರಿ  ಗೆಲುವು ಸಾಧಿಸಿದ್ದಾರೆ.

2014ರಲ್ಲಿ ಸುಮಾರು 70 ಸಾವಿರ ಮತಗಳಿಂದ ಗೆಲುವು ಕಂಡಿದ್ದ ಮೋದಿ, 2019ರಲ್ಲಿ 4 ಲಕ್ಕೂ ಅಧಿಕ ಮತಗಳಿಂದ ಭಾರೀ ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ 1.52 ಲಕ್ಷ ಮತಗಳಿಂದ ಗೆಲುವು ಕಂಡಿದ್ದಾರೆ.

ಮೋದಿ ವಿರುದ್ಧ ಸ್ಪರ್ಧಿಸಿದ್ದ ಕಾಂಗ್ರೆಸ್ ನ ಅಜಯ್ ರೈ ಆರಂಭದಲ್ಲಿ ಮುನ್ನಡೆ ಸಾಧಿಸುವ ಮೂಲಕ ಅಚ್ಚರಿ ಫಲತಾಂಶದ ಸೂಚನೆ ನೀಡಿದ್ದರು. ಆದರೆ ನಂತರದಲ್ಲಿ ಮೋದಿ ಮುನ್ನಡೆ ಸಾಧಿಸುವ ಮೂಲಕ ನಿರೀಕ್ಷಿತ ಗೆಲುವು ಕಂಡರೂ ಮತಗಳ ಪ್ರಮಾಣದಲ್ಲಿ ಇಳಿಕೆಯಾಗಿರುವುದು ಅವರ ವರ್ಚಸ್ಸು ಕಡಿಮೆ ಆಗಿರುವುದಕ್ಕೆ ಸೂಚನೆಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments