Home ತಾಜಾ ಸುದ್ದಿ ಕರ್ನಾಟಕ ರೈಲ್ವೆಗೆ ಬಜೆಟ್ ನಲ್ಲಿ 7000 ಕೋಟಿ ರೂ. ಮೀಸಲು: ಪ್ರಧಾನಿ ಮೋದಿ

ಕರ್ನಾಟಕ ರೈಲ್ವೆಗೆ ಬಜೆಟ್ ನಲ್ಲಿ 7000 ಕೋಟಿ ರೂ. ಮೀಸಲು: ಪ್ರಧಾನಿ ಮೋದಿ

by Editor
0 comments
pm-modi

ಕರ್ನಾಟಕಕ್ಕೆ ರೈಲ್ವೆ ಬಜೆಟ್ ನಲ್ಲಿ ಈ ಬಾರಿ 7000 ಕೋಟಿಗೂ ಅಧಿಕ ಮೊತ್ತ ಮೀಸಲಿಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ದೆಹಲಿಯಿಂದಲೇ ಮೂರು ಹೊಸ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿದ ನಂತರ ಮಾತನಾಡಿದ ಅವರು, ಈ ವರ್ಷದ ಬಜೆಟ್ ನಲ್ಲಿ ಕರ್ನಾಟಕಕ್ಕೆ 7000 ಕೋಟಿಗೂ ಅಧಿಕ ಮೊತ್ತ ಮೀಸಡಲಾಗಿದ್ದು, ಇದು ಕಳೆದ ವರ್ಷದ ಬಜೆಟ್ ಗಿಂತ 9 ಪಟ್ಟು ಹೆಚ್ಚಿನ ಮೊತ್ತವಾಗಿದೆ ಎಂದರು.

ಕರ್ನಾಟಕಕ್ಕೆ 8 ವಂದೇ ಭಾರತ್‌ ರೈಲುಗಳು ಸಂಪರ್ಕಿಸುತ್ತಿವೆ. ಇದರಿಂದ ರಾಜ್ಯದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.

ತಮಿಳುನಾಡಿಗೆ ರೈಲು ಬಜೆಟ್‌ಗೆ 6,000 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಮೀಸಲಿಡಲಾಗಿದೆ. 2014ಕ್ಕೆ ಹೋಲಿಸಿದರೆ 7 ಪಟ್ಟು ಹೆಚ್ಚಾಗಿದೆ. ಈಗ ನೂತನ ವಂದೇ ಭಾರತ್‌ ರೈಲಿನಿಂದಾಗಿ ತಮಿಳುನಾಡಿನಲ್ಲಿ ಒಟ್ಟು ವಂದೇ ಭಾರತ್ ರೈಲುಗಳ ಸಂಖ್ಯೆ 8ಕ್ಕೆ ಏರಲಿದೆ ಎಂದು ಅವರು ಹೇಳಿದರು.

banner

ಸೆಮಿ ಹೈಸ್ಪೀಡ್ ರೈಲುಗಳ ಅನುಷ್ಠಾನದಿಂದ ಜನರಲ್ಲಿ ತಮ್ಮ ವ್ಯಾಪಾರ, ಉದ್ಯೋಗ ಮತ್ತು ಅವರ ಕನಸುಗಳನ್ನು ವಿಸ್ತರಿಸಲು ವಿಶ್ವಾಸವನ್ನು ತುಂಬಿದೆ. ದೇಶಾದ್ಯಂತ 102 ವಂದೇ ಭಾರತ್ ರೈಲು ಸೇವೆಗಳು ಕಾರ್ಯನಿರ್ವಹಿಸುತ್ತಿವೆ. ಇದುವರೆಗೆ 3 ಕೋಟಿಗೂ ಹೆಚ್ಚು ಜನರು ಈ ರೈಲುಗಳಲ್ಲಿ ಪ್ರಯಾಣಿಸಿದ್ದಾರೆ ಎಂದು ಮೋದಿ ವಿವರಿಸಿದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
World News 60 ದಿನಗಳ ಕದನ ವಿರಾಮ ಘೋಷಿಸಿದ ಇಸ್ರೇಲ್-ಹೆಜಾಬುಲ್ಲಾ! ಬಿಸಿ ತುಪ್ಪವಾದ ಅದಾನಿ ಜೊತೆ ಬಾಂಧವ್ಯ ಕಡಿದುಕೊಳ್ಳಲು ಬಿಜೆಪಿ ನಿರ್ಧಾರ? Priyanka Gandhi ನ.28ಕ್ಕೆ ಸಂಸದೆಯಾಗಿ ಲೋಕಸಭೆ ಪ್ರವೇಶಿಸಲಿರುವ ಪ್ರಿಯಾಂಕಾ ಗಾಂಧಿ ಕಳಸಾ ಬಂಡೂರಿ, ಮೇಕೆದಾಟು ಯೋಜನೆ ಅನುಮತಿಗೆ ಡಿಸಿಎಂ ಡಿಕೆ ಶಿವಕುಮಾರ್ ಕೇಂದ್ರಕ್ಕೆ ಮನವಿ Netflix ನಯನತಾರಾ-ವಿಘ್ನೇಶ್ ದಂಪತಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ನಟ ಧನುಷ್! 28 ಎಸೆತಗಳಲ್ಲಿ ಟಿ-20 ಶತಕ ಸಿಡಿಸಿ ಗೇಲ್, ಪಂತ್ ದಾಖಲೆ ಮುರಿದ ಯುವ ಕ್ರಿಕೆಟಿಗ! Law News ಬೆಂಗಳೂರಿನಲ್ಲಿ ಲಾಕಪ್ ಡೆತ್‌: ನಾಲ್ವರು ಪೊಲೀಸರಿಗೆ 12 ವರ್ಷ ಶಿಕ್ಷೆ! vote power ಸ್ವಾಮೀಜಿಗೆ ಸಂವಿಧಾನ ಗೊತ್ತಿಲ್ಲ: ಸಚಿವ ಎಂ.ಮಹದೇವಪ್ಪ ಅಸಮಾಧಾನ Muda Scam ಸಿಬಿಐನಿಂದ ಮುಡಾ ಹಗರಣದ ತನಿಖೆ: ಶುಕ್ರವಾರ ಹೈಕೋರ್ಟ್ ತೀರ್ಪು ಪ್ರಕಟ UP Accident ನಿದ್ದೆಗೆ ಜಾರಿ ಚಾಲಕ, ಚಿರನಿದ್ರೆಗೆ ಜಾರಿಗೆ 5 ವೈದ್ಯರು!