Thursday, December 25, 2025
Google search engine
Homeತಾಜಾ ಸುದ್ದಿ10ನೇ ತರಗತಿಯ 80 ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿ ಮನೆಗೆ ಕಳಿಸಿದ ಪ್ರಿನ್ಸಿಪಾಲ್!

10ನೇ ತರಗತಿಯ 80 ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿ ಮನೆಗೆ ಕಳಿಸಿದ ಪ್ರಿನ್ಸಿಪಾಲ್!

10ನೇ ತರಗತಿಯ 80 ವಿದ್ಯಾರ್ಥಿನಿಯರ ಶರ್ಟ್ ಬಿಚ್ಚಿಸಿ ಪ್ರಿನ್ಸಿಪಾಲ್ ಮನೆಗೆ ಕಳಿಸಿದ ಹೀನಾಯ ಕೃತ್ಯ ಜಾರ್ಖಂಡ್ ನಲ್ಲಿ ಶನಿವಾರ ನಡೆದಿದೆ.

ಧನ್ ಬಾದ್ ಜಿಲ್ಲೆಯ ದಿಗ್ವಾದಿ ಪಟ್ಟಣದ ಖಾಸಗಿ ಶಾಲೆಯ ಪ್ರಿನ್ಸಿಪಾಲ್ 80 ವಿದ್ಯಾರ್ಥಿನಿಯರ ಬೆನ್ನ ಮೇಲೆ ಬರೆಯಲು ಶರ್ಟ್ ಬಿಚ್ಚಿಸಿದ್ದು, ನಂತರ ಶರ್ಟ್ ಧರಿಸದೇ ಮನೆಗೆ ಕಳುಹಿಸಲಾಗಿದೆ.

ಪೆನ್ ಡೇ ದಿನಾಚರಣೆ ವಿದ್ಯಾರ್ಥಿನಿಯರು ಪರಸ್ಪರ ಶರ್ಟ್ ಮೇಲೆ ಬರೆದುಕೊಂಡು ಸಂಭ್ರಮಿಸಿದ್ದರು. ಆದರೆ ಶರ್ಟ್ ಬಿಚ್ಚಿಸಿ ಅಪಮಾನಿಸಲಾಗಿದೆ ಎಂದು ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಮಕ್ಕಳು ಪರಸ್ಪರ ಪೆನ್ ಡೇ ಆಚರಿಸಿದ್ದಕ್ಕೆ ಪ್ರಿನ್ಸಿಪಾಲ್ ಆಕ್ಷೇಪ ವ್ಯಕ್ತಪಡಿಸಿದ್ದು, ಎಲ್ಲರೂ ಶರ್ಟ್ ಬಿಚ್ಚಿ ಕ್ಷಮೆ ಕೇಳಲು ಸೂಚಿಸಿದರು. ಇದಕ್ಕೆ ವಿದ್ಯಾರ್ಥಿನಿಯರು ಆಕ್ಷೇಪಿಸಿದಾಗ ಶರ್ಟ್ ಬಿಚ್ಚಿಸಿ ಮನೆಗೆ ಹಾಗೆ ಹೋಗುವಂತೆ ಸೂಚಿಸಿದ್ದಾರೆ.

ಪೋಷಕರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರೆ, ಶಾಲೆಯ ಆಡಳಿತ ಮಂಡಳಿ ಪ್ರಕರಣದ ತನಿಖೆಗೆ ಸಮಿತಿ ರಚಿಸಿದೆ. ವರದಿ ಬಂದ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಶಿಕ್ಷಣ ಇಲಾಖೆ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments