ಇನ್ಫೋಸಿಸ್ ನಲ್ಲಿ ಅದ್ಧೂರಿಯಾಗಿ ಓಣಂ ಆಚರಣೆ ಮಾಡಿರುವುದಕ್ಕೆ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಇದು ಕನ್ನಡ ಸಾರ್ವಭೌಮತ್ವಕ್ಕೆ ಧಕ್ಕೆ ತರಲಿದೆ ಎಂದು ಆರೋಪಿಸಿವೆ.
ಕರಿ ಸುಬ್ಬಯ್ಯ ಎಂಬುವವರು ಇನ್ಫೋಸಿಸ್ ನ ಬೆಂಗಳೂರು ಕಚೇರಿಯಲ್ಲಿ ಕೇರಳದ ಪ್ರಮುಖ ಹಬ್ಬವಾದ ಓಣಂ ಆಚರಿಸಿದ ಫೋಟೊವನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದು ಕರ್ನಾಟಕದ ರಾಜಧಾನಿ ಬೆಂಗಳೂರು ಇದು. ಇಲ್ಲಿ ಕರ್ನಾಟಕ ಕಂಪನಿಯಲ್ಲಿ ನೆರೆಯ ರಾಜ್ಯದ ಓಣಂ ಆಚರಿಸುತ್ತಾರೆ ಎಂದರೆ ಇದನ್ನು ಹಗುರವಾಗಿ ಪರಿಗಣಿಸಲು ಹೇಗೆ ಸಾಧ್ಯ ಎಂದು ಫೋಟೊ ಕೆಳಗೆ ಶೀರ್ಷಿಕೆ ಬರೆದಿದ್ದಾರೆ.
ಓಣಂ ಕೇರಳದ ಪ್ರಮುಖ ಹಬ್ಬವಾಗಿದೆ. ಆದರೆ ಬೆಂಗಳೂರಿನಲ್ಲಿ ಓಣಂ ಆಚರಿಸಲಾಗುತ್ತಿದೆ. ಇದಕ್ಕೆ ಕನ್ನಡಿಗರು ಹಾಗೂ ಕನ್ನಡ ಪರ ಸಂಘಟನೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ.
https://twitter.com/KariSubbayya/status/1838951212164767865
ಕೇರಳಿಗರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿಗೆ ವಲಸೆ ಬರುತ್ತಿದ್ದು, ದಿನದಿಂದ ದಿನಕ್ಕೆ ಇವರ ಆರ್ಭಟ ಹೆಚ್ಚಾಗುತ್ತಿದ್ದು, ತಮ್ಮ ಸಂಸ್ಕೃತಿಯನ್ನು ಕನ್ನಡಿಗರ ಮೇಲೆ ಹೇರುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಕೆಲವು ಕನ್ನಡಿಗರೇ ಬೆಂಬಲ ನೀಡುತ್ತಿರುವುದು ವಿಷಾದನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮ್ಮ ಕರ್ನಾಟಕದಲ್ಲಿ ತಮಿಳುನಾಡು, ಕೇರಳ, ಉತ್ತರ ಭಾರತೀಯ ಸಂಸ್ಕೃತಿಕ ಹಬ್ಬಗಳನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಅದೇ ರೀತಿ ಕನ್ನಡದ ಹಬ್ಬ ಹಾಗೂ ಆಚರಣೆಗಳನ್ನು ಅಲ್ಲಿನ ರಾಜ್ಯಗಳಲ್ಲಿ ಇಷ್ಟೇ ಅದ್ಧೂರಿಯಾಗಿ ಆಚರಿಸಲು ಬಿಡುತ್ತಾರೆಯೇ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.
https://twitter.com/Lifeuishte/status/1839285718725579127