ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ 11 ಶಂಕಿತ ಕುಕ್ಕಿ ಉಗ್ರರನ್ನು ಎನ್ ಕೌಂಟರ್ ಮಾಡಲಾಗಿದ್ದು, ಮಣಿಪುರದಲ್ಲಿ ನಿಷೇದಾಜ್ಞೆ ಜಾರಿ ಮಾಡಲಾಗಿದೆ.
ಜಿರಿಬಾಮ್ ಜಿಲ್ಲೆಯಲ್ಲಿ ಸೋಮವಾರ ಭದ್ರತಾ ಪಡೆ ಕಾರ್ಯಾಚರಣೆ ನಡೆಸಿದ್ದು, ಘಟನಾ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಆಗಿರುವುದರಿಂದ ಸಿಆರ್ ಪಿಎಫ್ ಯೋಧರು ಬಿಗಿ ಭದ್ರತೆ ಒದಗಿಸಿದ್ದಾರೆ.
ಅಸ್ಸಾಂನ ಸಿಲಿಚಾರ್ ಮೆಡಿಕಲ್ ಕಾಲೇಜಿನಲ್ಲಿ ಸೇನಾ ಶಿಬಿರ ತೆರವುಗೊಳಿಸುವ ವೇಳೆ ಕುಕ್ಕಿ ಸಮುದಾಯಕ್ಕೆ ಸೇರಿದ ವಲಸೆ ಉಗ್ರರು ಪೊಲೀಸ್ ಠಾಣೆ ಮೇಲೆ ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಸೇನೆ ಪ್ರತಿದಾಳಿ ನಡೆಸಿತು ಎಂದು ಹೇಳಲಾಗಿದೆ.
ದಾಳಿ ನಡೆಸಿದ ಉಗ್ರರು ಸೇನಾ ಶಿಬಿರವನ್ನು ಕೂಡ ಗುರಿಯಾಗಿಸಿಕೊಂಡಿದ್ದರು ಎಂದು ಹೇಳಲಾಗಿದೆ. ದಾಳಿಯ ಮುನ್ಸೂಚನೆಯಿಂದ ಶಿಬಿರದಲ್ಲಿದ್ದ ಯೋಧರನ್ನು ತೆರವುಗೊಳಿಸಲಾಗಿತ್ತು. ಈಗಾಗಲೇ ಹಲವು ಬಾರಿ ಜಿರಿಬಾಮ್ ಪೊಲೀಸ್ ಠಾಣೆ ಗುರಿಯಾಗಿ ಉಗ್ರರು ದಾಳಿ ನಡೆಸಿದ್ದಾರೆ.