ಪ್ರಧಾನಿ ನರೇಂದ್ರ ಮೋದಿ ಹಾಗೂ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಸಂಸತ್ ಭವನದಲ್ಲಿ ಆಯೋಜಿಸಲಾಗಿದ್ದ ಅನೌಪಚಾರಿಕ ಸಹಾಕೂಟದಲ್ಲಿ ಮುಖಾಮುಖಿ ಆಗಿದ್ದು, ಪರಸ್ಪರ ಹಸ್ತಲಾಘವ ನೀಡಿ ಅಭಿನಂದಿಸಿದ್ದಾರೆ.
ಬಜೆಟ್ ಅಧಿವೇಶನ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಶುಕ್ರವಾರ ನಡೆದ ಚಹಾಕೂಟದಲ್ಲಿ ಪ್ರಧಾನಿ ಮೋದಿ, ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಇತರೆ ಮುಖಂಡರು ಪಾಲ್ಗೊಂಡಿದ್ದರು.
ಆಗಸ್ಟ್ 12ರವರೆಗೆ ಬಜೆಟ್ ಅಧಿವೇಶನ ನಿಗದಿಯಾಗಿತ್ತು. ಆದರೆ ಲೋಕಸಭಾ ಸ್ಪೀಕರ್ ಓಂಪ್ರಕಾಶ್ ಬಿರ್ಲಾ ಅವಧಿಗೂ ಮೊದಲೇ ಅಧಿವೇಶನಕ್ಕೆ ತೆರೆ ಎಳೆದಿದ್ದು, ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾರೆ.
ಚಹಾಕೂಟದಲ್ಲಿ ಸ್ಪೀಕರ್ ಓಂಪ್ರಕಾಶ್ ಬಿರ್ಲಾ, ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವರು ಮುಂತಾದವರು ಭಾಗವಹಿಸಿದ್ದು, ಪರಸ್ಪರ ನಗುತ್ತಾ ಕ್ಯಾಮರಾಗಳಿಗೆ ಫೋಸ್ ನೀಡಿದರು.
ಸ್ಪೀಕರ್ ಪಕ್ಕದಲ್ಲಿ ಮೋದಿ ಆಸೀನರಾಗಿದ್ದರೆ, ವಿವಿಧ ಪಕ್ಷಗಳ ಮುಖಂಡರ ಜೊತೆ ರಾಹುಲ್ ಗಾಂಧಿ, ಕಿರಣ್ ರಿಜಿಜು ಪಾಸ್ವಾನ್ ಜೊತೆ ಬಲಭಾಗದಲ್ಲಿ ಕುಳಿದರೆ, ಎದುರುಗಡೆ ಅಮಿತ್ ಶಾ, ರಾಜನಾಥ್ ಸಿಂಗ್, ಮುಂತಾದವರು ಕುಳಿತಿದ್ದರು.