Friday, October 18, 2024
Google search engine
Homeಜಿಲ್ಲಾ ಸುದ್ದಿಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ, ನ್ಯಾಯದ ತಕ್ಕಡಿ ಜರುಗಿತು: ಇತಿಹಾಸ ಪ್ರಸಿದ್ಧ ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕ

ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ, ನ್ಯಾಯದ ತಕ್ಕಡಿ ಜರುಗಿತು: ಇತಿಹಾಸ ಪ್ರಸಿದ್ಧ ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕ

ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ, ನ್ಯಾಯದ ತಕ್ಕಡಿ ಜರುಗಿತು, ಜ್ಞಾನದ ಹಣತೆ ಹಚ್ಚಿದರು, ಜೀವರಾಶಿ ಸಂಪಾದಲೆ ಪರಾಕ್ ಎಂದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನ ಇತಿಹಾಸ ಪ್ರಸಿದ್ಧ ಮೈಲಾಂಗರಲಿಂಗೇಶ್ವರ ಕಾರ್ಣಿಕ ನುಡಿದಿದೆ.

ವಿಜಯದಶಮಿಯ ಮಾರನೇ ದಿನವಾದ ಭಾನುವಾರ ಮಹಾನವಮಿ ಬಯಲಿನಲ್ಲಿ ನಡೆದ ಮೈಲಾರಲಿಂಗ ಸ್ವಾಮಿ ದೇವಸ್ಥಾನದಲ್ಲಿ ರಾತ್ರಿಯಿಂದ ಹೂವಿನ ಪಲಕ್ಕಿಯೊಂದಿಗೆ ಮೆರವಣಿಗೆ ನಡೆದಿದ್ದು, ಭಾನುವಾರ ಬೆಳಿಗ್ಗೆ ದಶರಥ ಪೂಜಾರ್ ಕಾರ್ಣಿಕ ನುಡಿದಿದ್ದಾರೆ.

ಮೈಲಾರಲಿಂಗೇಶ್ವರ ದರ್ಶನಕ್ಕೆ ರಾಜ್ಯದ ವಿವಿಧ ಮೂಲೆಗಳಿಂದ ಅಗಮಿಸಿರುವ ಭಕ್ತರು. ಹಲವು ಬಾರಿ ಕಾರ್ಣಿಕದ ನುಡಿಯಂತೆ ನಡೆದಿರುವ ಉದಾಹರಣೆ ಇದೆ. ಕಾರ್ಣಿಕ ಕೇಳಲು ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದರು. ಕಾರ್ಣಿಕ ನುಡಿದಿರುವ ಭವಷ್ಯವಾಣಿ ಬಗ್ಗೆ ಭಕ್ತರಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಕಾರ್ಣಿಕದ ಭವಿಷ್ಯವನ್ನು ಈ ರೀತಿ ವಿಶ್ಲೇಷಿಸಲಾಗಿದೆ.

ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ: ರಾಮ ಬಾಣದ ಗುರಿ ಎಂದೂ ತಪ್ಪಿಲ್ಲ. ಅದರಂತೆ ನಿಶ್ಚಿತ ಗುರಿಯೊಂದಿಗೆ ಮಾಡಿದ ಕೆಲಸ ಕೈತಪ್ಪುವುದಿಲ್ಲ.

ನ್ಯಾಯದ ತಕ್ಕಡಿ ಜರುಗಿತ್ತು: ರಾಜ್ಯದಲ್ಲಿ ನ್ಯಾಯಕ್ಕೆ ಜಯ ಸಿಗದೇ ಅನ್ಯಾಯಕ್ಕೆ ಜಯವಾಗುತ್ತೆ. ಅನ್ಯಾಯದ ದಾರಿಯಲ್ಲಿದ್ದವರಿಗೆ ಜಯವಾಗುತ್ತೆ.

ಜ್ಞಾನದ ಹಣತೆ ಹಚ್ಚಿದರು: ರಾಜ್ಯದಲ್ಲಿ ನಡೆಯ ಬಹುದಾದ ಘಟನೆ ಬಗ್ಗೆ ಮುಂಚಿತವಾಗಿ ಜ್ಞಾನಿಗಳು ಮಾಹಿತಿ ನೀಡುತ್ತಾರೆ.

ಜೀವ ರಾಶಿಗೆ ಸಂಪಾಯಿತಲೇ ಪರಾಕ್: ರಾಜ್ಯದಲ್ಲಿ ಉತ್ತಮ ಮಳೆಯಾಗಿ ಸಕಲ ಜೀವರಾಶಿಗಳು ಸಂಪಾಗಿರುತ್ತೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments