Thursday, September 19, 2024
Google search engine
Homeತಾಜಾ ಸುದ್ದಿಆಟ್ಲಿ ಚಿತ್ರದಲ್ಲಿ ಒಂದಾಗಲಿರುವ ಸಲ್ಮಾನ್ ಖಾನ್- ರಜನಿಕಾಂತ್!

ಆಟ್ಲಿ ಚಿತ್ರದಲ್ಲಿ ಒಂದಾಗಲಿರುವ ಸಲ್ಮಾನ್ ಖಾನ್- ರಜನಿಕಾಂತ್!

ಆಟ್ಲಿ ನಿರ್ದೇಶನದ ಹೊಸ ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ರಜನಿಕಾಂತ್ ಜೊತೆಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗಿದ್ದು, ಭಾರತೀಯ ಚಿತ್ರರಂಗದಲ್ಲೇ ಅತೀ ದೊಡ್ಡ ಚಿತ್ರವಾಗುವ ನಿರೀಕ್ಷೆ ಹುಟ್ಟಿಸಿದೆ.

ಆಟ್ಲಿ ನಿರ್ದೇಶನದ ಚಿತ್ರದಲ್ಲಿ ಸಲ್ಮಾನ್ ಖಾನ್ ನಟಿಸಲಿದ್ದಾರೆ. ಆದರೆ ಇದೀಗ ಈ ಚಿತ್ರದಲ್ಲಿ ರಜನಿಕಾಂತ್ ಕೂಡ ನಟಿಸುವ ಸಾಧ್ಯತೆ ಇದ್ದು, ಮಾತುಕತೆ ನಡೆದಿದೆ ಎಂದು ಚಿತ್ರ ತಂಡದ ಮೂಲಗಳು ತಿಳಿಸಿವೆ.

ಸನ್ ಪಿಕ್ಕರ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಚಿತ್ರದ ಶೀರ್ಷಿಕೆ ಘೋಷಿಸಲಾಗಿಲ್ಲ. ರಜನಿಕಾಂತ್ ಮತ್ತು ಸಲ್ಮಾನ್ ಖಾನ್ ಇಬ್ಬರೂಈ ಚಿತ್ರದಲ್ಲಿ ನಟಿಸಲು ಒಪ್ಪಿಗೆ ಸೂಚಿಸುವ ಭರವಸೆ ಇದೆ ಎಂದು ಚಿತ್ರ ತಂಡ ತಿಳಿಸಿದೆ.

ಮುಂದಿನ ತಿಂಗಳು ರಜನಿಕಾಂತ್ ಜೊತೆ ಮಾತುಕತೆ ನಡೆಯಲಿದೆ. ಪ್ರಸ್ತುತ ಸಲ್ಮಾನ್ ಖಾನ್ ಸಿಕಂದರ್ ಚಿತ್ರದಲ್ಲಿ ಬ್ಯೂಸಿಯಾಗಿದ್ದರೆ, ರಜನಿಕಾಂತ್ ಕೂಲಿ ಚಿತ್ರದಲ್ಲಿ ಬ್ಯೂಸಿ ಆಗಿದ್ದಾರೆ. ಇಬ್ಬರೂ ಈ ಚಿತ್ರಗಳನ್ನು ಪೂರೈಸಿದ ನಂತರ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments