Monday, September 16, 2024
Google search engine
Homeತಾಜಾ ಸುದ್ದಿಪ್ರಧಾನಿ ಮೋದಿ ತಪ್ಪು ಮಾಡಿದ್ದನ್ನೂ ಹೇಳುತ್ತೇವೆ: ಶಂಕರಾಚಾರ್ಯ ಸ್ವಾಮೀಜಿ

ಪ್ರಧಾನಿ ಮೋದಿ ತಪ್ಪು ಮಾಡಿದ್ದನ್ನೂ ಹೇಳುತ್ತೇವೆ: ಶಂಕರಾಚಾರ್ಯ ಸ್ವಾಮೀಜಿ

ಪ್ರಧಾನಿ ಮೋದಿ ನಮಗೆ ಶತ್ರು ಅಲ್ಲ, ಆದರೆ ಅವರು ತಪ್ಪು ಮಾಡಿದರೂ ನೇರವಾಗಿ ಹೇಳುತ್ತೇವೆ ಎಂದು ಶಂಕರಾಚಾರ್ಯ ಮಠದ ಹಿರಿಯ ಸ್ವಾಮೀಜಿ ಅವಿಮುಕ್ತೇಶ್ವರಾನಂದ ಸರಸ್ವತಿ ಹೇಳಿದ್ದಾರೆ.

ಸೋಮವಾರ ಮಹಾರಾಷ್ಟ್ರ ಮಾಜಿ ಸಿಎಂ ಹಾಗೂ ಶಿವಸೇನಾ ಮುಖಂಡ ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ನಮಗೆ ಶತ್ರುವಲ್ಲ. ಅವರಿಗೂ ನಾವು ಒಳ್ಳೆಯದು ಬಯಸುತ್ತೇವೆ. ಅವರಿಗೆ ಶುಭವಾಗಲಿ ಎಂದು ಹಾರೈಸುತ್ತೇವೆ. ಆದರೆ ತಪ್ಪು ಮಾಡಿದರೆ ಅದನ್ನು ನೇರವಾಗಿಯೇ ಪ್ರಸ್ತಾಪಿಸುತ್ತೇವೆ ಎಂದರು.

ನಮಗೆ ರಾಜಕೀಯದಿಂದ ಏನೂ ಆಗಬೇಕಿಲ್ಲ. ಆದರೆ ಹಿಂದುಗಳ ಹೆಸರಿನಲ್ಲಿಯೇ ಹಿಂದುಗಳಿಗೆ ದ್ರೋಹ ಆಗುವುದನ್ನು ಜನರು ಸಹಿಸುವುದಿಲ್ಲ. ಹಿಂದೂ ದ್ರೋಹ ಎಸಗುವುದಿಲ್ಲ. ಹಾಗೆ ಮಾಡುವವನು ಹಿಂದೂ ಆಗಲಾರ. ದ್ರೋಹ ಸಹಿಸುವವನೇ ನಿಜವಾದ ಹಿಂದು. ಹಿಂದೂತ್ವದ ಹೆಸರಿನಲ್ಲಿ ದ್ರೋಹ ಎಸಗಿದ್ದಕ್ಕಾಗಿಯೇ ಲೋಕಸಭಾ ಚುನಾವಣೆಯಲ್ಲಿ ಪಾಠ ಕಲಿಸಿದ್ದಾರೆ ಎಂದು ಅವರು ಹೇಳಿದರು.

ಮುಖೇಶ್ ಅಂಬಾನಿ ಪುತ್ರನ ಮದುವೆ ಸಮಾರಂಭದಲ್ಲಿ ಮೋದಿ ತಮ್ಮನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಅವರು, ಹೌದು, ಪ್ರಧಾನಿ ನನ್ನ ಬಳಿ ಬಂದು ನಮಸ್ಕರಿಸಿದರು. ನಾನು ಅವರಿಗೆ ಆಶೀರ್ವಾದ ಮಾಡಿದೆ. ನಮ್ಮ ಬಳಿ ಯಾರೇ ಬಂದರೂ ಅವರಿಗೆ ನಾವು ಒಳ್ಳೆಯದ್ದನ್ನೇ ಬಯಸುತ್ತೇವೆ ಎಂದು ಶಂಕರಾಚಾರ್ಯ ಮಠದ ಹಿರಿಯ ಸ್ವಾಮೀಜಿ ಹೇಳಿದರು.

ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾತನಾಡಿದೆ. ಅವರಿಗೆ ದ್ರೋಹ ಮಾಡಿ ಮುಖ್ಯಮಂತ್ರಿ ಸ್ಥಾನ ಕಸಿದುಕೊಳ್ಳಲಾಗಿದೆ. ಇದು ನಮಗೂ ಬೇಸರ ತರಿಸಿದೆ. ಮಹಾರಾಷ್ಟ್ರದ ಜನರು ದ್ರೋಹವನ್ನು ಮರೆತಿಲ್ಲ. ಅವರು ದ್ರೋಹಿಗಳಿಗೆ ಪಾಠ ಕಲಿಸಲಿದ್ದಾರೆ ಎಂದು ಅವರು ನುಡಿದರು.

ಶಂಕರಾಚಾರ್ಯರು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು. ಅಲ್ಲದೇ ಮಂದಿರ ನಿರ್ಮಾಣ ಪೂರ್ಣಗೊಳ್ಳದೇ ಸಂಪ್ರದಾಯ ಉಲ್ಲಂಘಿಸಿ ಮಾಡುವ ಸಮಾರಂಭಕ್ಕೆ ಬರುವುದಿಲ್ಲ ಎಂದು ಹೇಳಿದ್ದರು. ಅಲ್ಲದೇ ಇತ್ತೀಚೆಗೆ ದೆಹಲಿಯಲ್ಲಿ ಕೇದರಾನಾಥ ದೇವಸ್ಥಾನ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ ಉತ್ತರಾಖಂಡ್ ಸಿಎಂ ವರ್ತನೆಯನ್ನು ಖಂಡಿಸಿದ ಅವರು, ಹಿಮಾಲಯದಲ್ಲಿ ಕೇದರಾನಾಥ ದೇವಸ್ಥಾನ ಇರುವಾಗ ಮತ್ತೊಂದು ಕಡೆ ನಿರ್ಮಿಸಿ ಏಕೆ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಇಂತಹ ಗಿಮಿಕ್ ಗಳನ್ನು ಜನರು ಹೆಚ್ಚು ದಿನ ನಂಬುವುದಿಲ್ಲ ಎಂದು ಶಂಕರಾಚಾರ್ಯರು ಆರೋಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments