Saturday, July 6, 2024
Google search engine
Homeತಾಜಾ ಸುದ್ದಿಪುಣ್ಯಕ್ಷೇತ್ರಗಳ ಯಾತ್ರೆ ಹೋಗುವವರಿಗೆ ಸಿಹಿಸುದ್ದಿ: ರಾಜ್ಯ ಸರ್ಕಾರದಿಂದ ಸಹಾಯಧನ ಸರಳೀಕರಣ!

ಪುಣ್ಯಕ್ಷೇತ್ರಗಳ ಯಾತ್ರೆ ಹೋಗುವವರಿಗೆ ಸಿಹಿಸುದ್ದಿ: ರಾಜ್ಯ ಸರ್ಕಾರದಿಂದ ಸಹಾಯಧನ ಸರಳೀಕರಣ!

ಪುಣ್ಯ ಕ್ಷೇತ್ರಗಳಿಗೆ ಪ್ರವಾಸ ಹೋಗುವ ಯಾತ್ರಾರ್ಥಿಗಳಿಗೆ ಸಹಾಯಧನ ಪಾವತಿ ಮುಂತಾದ ಆಡಳಿತವನ್ನು ಸರಳೀಕರಣಗೊಳಿಸಿರುವ ರಾಜ್ಯ ಮುಜರಾಯಿ ಇಲಾಖೆ, ಸರ್ಕಾರಿ ಕಚೇರಿಗಳಿಗೆ ಅಲೆದಾಟವನ್ನು ತಪ್ಪಿಸಿದೆ.

ಯಾತ್ರಾರ್ಥಿಗಳಿಗೆ ನೀಡಲಾಗುವ ಸಹಾಯಧನ ಪಾವತಿ ಮತ್ತಷ್ಟು ಸರಳೀಕೃತಗೊಳಿಸಲಾಗಿದ್ದು, ಹಲವು ನಿಬಂಧನೆ ಹಾಗೂ ಕಚೇರಿಗಳಿಗೆ ತಡಕಾಡುವ ವ್ಯವಸ್ಥೆಗೆ ಬ್ರೇಕ್ ಹಾಕುವ ಮೂಲಕ ಮುಜರಾಯಿ ಇಲಾಖೆ ಯಾತ್ರಾರ್ಥಿಗಳಿಗೆ ಮತ್ತಷ್ಟು ಅನುಕೂಲ ಮಾಡಿಕೊಟ್ಟಿದೆ.

ಹೊಸ ವಿಧಾನ ಹೇಗೆ?

ಮೊಬೈಲ್ ಆಪ್ ಮೂಲಕ ನೋಂದಣಿ ಮಾಡಿಕೊಂಡು, ಜಿಯೋಲೊಕೇಶನ್‌ ‌ ಮಾಹಿತಿಯನ್ನು ಪೂರ್ಣಗೊಳಿಸಬೇಕು

ಸೆಲ್ಫಿ ಒಳಗೊಂಡಿರುವ ಫೋಟೋವನ್ನು ಅಪ್‌ಲೋಡ್ ಮಾಡುವ ಮೂಲಕ ಯಾತ್ರಾ ಸ್ಥಳದಲ್ಲಿ ಯಾತ್ರಾರ್ಥಿಗಳ ಉಪಸ್ಥಿತಿಯನ್ನು ಖಚಿತಪಡಿಸಬೇಕು

ಫೋಟೋದ ಹಿನ್ನೆಲೆಯಲ್ಲಿ ದೇವಾಲಯದ ಪ್ರಮುಖ ಸ್ಥಳವನ್ನು ಕಾಣುವಂತೆ ಅಪ್‌ಲೋಡ್ ಮಾಡಬೇಕು

ಪ್ರವರ್ಗ ಸಿ ದೇವಾಲಯದ ಅರ್ಚಕರು / ನೌಕರರು ಹಾಗೂ ಅವರ ಕುಟುಂಬದ ಒಬ್ಬರಿಗೆ ಒಟ್ಟು 2400 ಜನಕ್ಕೆ ವರ್ಷದಲ್ಲಿ ಒಂದು ಬಾರಿ ಉಚಿತ ಕಾಶಿ ಯಾತ್ರೆಗೆ ಅವಕಾಶ ಕಲ್ಪಿಸಲಾಗಿದೆ

ಚಾರ್ ಧಾಮ್ ಯಾತ್ರೆಗೆ ರೂ. 30,000, ಕೈಲಾಸ ಮಾನಸ ಸರೋವರ ಯಾತ್ರೆಗೆ ರೂ‌ 20,000 ಮತ್ತು ಕಾಶಿ ಯಾತ್ರೆಯಲ್ಲಿ ಗಯಾ ಸೇರಿಸಿ ರೂ.5,000

ಹಾಗೂ ರೈಲು ಮೂಲಕ ಯಾತ್ರೆ ಕೈಗೊಳುವ ಯಾತ್ರಾರ್ಥಿಗಳಿಗೆ ರೂ.5000 ದಿಂದ ರೂ 7500 ಕ್ಕೆ ಸಹಾಯಧನ ಹೆಚ್ಚಿಸಲಾಗಿದೆ

ಒಟ್ಟು 30000ಕ್ಕೂ ಹೆಚ್ಚು ಯಾತ್ರಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments